ಬಸ್ ಏಜೆಂಟರ ಸಂಘದಿಂದ ಜನ್ಮದಿನ ಆಚರಣೆ
ಹುಳಿಯಾರು: ಹೋಬಳಿ ಖಾಸಗಿ ಬಸ್ ಏಜೆಂಟರ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಸಕ ಸಿ.ಬಿ.ಸುರೇಶ್ಬಾಬು ಅವರ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ, ಕೇಕ್ ಕತ್ತರಿಸಿ, ಸಿಹಿ ಹಾಗೂ ಲಘು ಉಪಹಾರ ವಿತರಿಸಿದರು. ಅಪಘಾತದಲ್ಲಿ ಮರಣ ಹೊಂದಿದವರ ಕುಟುಂಬದವರಿಗೆ ಹಾಗೂ ಗಾಯಗೊಂಡ ಫಲಾನುಭವಿಗಳಿಗೆ ಪರಿಹಾರ ಹಣವಿತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿ, ನಂತರ ಗೋಡೆಕೆರೆಗೆ ತೆರಳಿ ನೆಚ್ಚಿನ ನಾಯಕರಿಗೆ ಶುಭಾಷಯ ತಿಳಿಸಿದರು. ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಕುಮಾರ್, ವಿಶ್ವಣ್ಣ, ಇಂತಿ ಯಾಜ್, ಅಮಾನುಲ್ಲಾ, ರಾಜಣ್ಣ, ಚಂದ್ರಶೇಖರ್, ನಾಗಭೂಷಣ್, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.