20ರಂದು ಪ್ರಥಮ ವಾರ್ಷಿಕೋತ್ಸವ
ತುಮಕೂರು: ಗುಬ್ಬಿಯ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಹಾಗೂ ಮುಖ ಮಂಟಪದಲ್ಲಿ ನೂತನ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಉಯ್ಯಾಲೆ ಮಂಟಪದ ಕಳಸ ಸ್ಥಾಪನೆ ಮಹೋತ್ಸವ ಫೆ. 20 ರಂದು ಸಂಜೆ 6-30 ರಿಂದ ಏರ್ಪಾಟಾಗಿದೆ. ಫೆ. 21 ರಂದು ಬೆಳಗ್ಗೆ 5-30 ರಿಂದ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದೆ. ಸಿದ್ದಗಂಗಾ ಮಠಾಧ್ಯಕ್ಷ ಡಾ. ಶಿವಕುಮಾರಸ್ವಾಮಿಗಳು, ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀಗಳ ಸಾನಿಧ್ಯದಲ್ಲಿ, ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಅವರ ನೇತೃತ್ವದಲ್ಲಿ ಕಾರ್ಯಕ್ರಮ ಏರ್ಪಾಟಾಗಿದೆ.
ಆರೋಗ್ಯ ತಪಾಸಣಾ ಶಿಬಿರ
ತುಮಕೂರಿನ ಶ್ರೀದೇವಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತುಮಕೂರು ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 400 ಕ್ಕೂ ಹೆಚ್ಚು ಮಂದಿ ಈ ಶಿಬಿರದಲ್ಲಿ ಪ್ರಯೋಜನ ಪಡೆದರು.
24 ರಂದು ಧರ್ಮಜಾಗೃತಿ
ಶಿವಡಂಗುರ ಪತ್ರಿಕೆ ವತಿಯಿಂದ ಫೆ. 24 ರಂದು ಬೆಳಗ್ಗೆ 10 ಗಂಟೆಗೆ ಇಷ್ಟಲಿಂಗ ಶಿವಪೂಜೆ, ಧರ್ಮಜಾಗೃತಿ ಸಭೆ, ಸನ್ಮಾನ ಸಮಾರಂಭಗಳು ತುಮಕೂರಿನ ಚಿಕ್ಕಪೇಟೆಯ ಕಲ್ಯಾಣ ಮಂಟಪದಲ್ಲಿ ಏರ್ಪಾಟಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಹಿರೇಮಠಾದ್ಯಕ್ಷ ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಬೆಳ್ಳಾವಿ ಕಾರದೇಶ್ವರ ಮಠದ ವೀರಬಸವ ಸ್ವಾಮಿಗಳು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟಿಜಿಎಂಸಿ ಅಧ್ಯಕ್ಷ ಎನ್.ಆರ್. ಜಗದೀಶ್, ಕೆಜೆಪಿ ಮುಖಂಡ ಜ್ಯೋತಿಗಣೇಶ್, ಪಜ್ಲೂರ್ ರೆಹಮಾನ್, ಡಾ. ಲೀಲಾ ಲೇಪಾಕ್ಷ್, ರಾಮಚಂದ್ರಪ್ಪ, ಟಿ.ಆರ್. ಸದಾಶಿವಯ್ಯ, ವಿ. ರಾಜಶೇಖರ್, ಎಂ.ವಿ. ಬಸವರಾಜು ಇತರರು ಪಾಲ್ಗೊಳ್ಳಲ್ಲಿದ್ದಾರೆ.
ಅರ್ಜಿ ಆಹ್ವಾನ
2013 -14 ನೇ ಸಾಲಿಗೆ ವೇತನ ಸಹಿತವಾಗಿ ಬಿಎ, ಬಿಎಸ್ಸಿ, ವ್ಯಾಸಂಗ ಮಾಡಲು ಇಚ್ಛಿಸುವ ತುಮಕೂರು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಫೆ. 21 ರೊಳಗೆ ಸಲ್ಲಿಸಲು ತುಮಕೂರು ಬಿಇಓ ಕುಮುದಮ್ಮ ಕೋರಿದ್ದಾರೆ.