ಚರಂಡಿಗೆ ಉರುಳಿದ ಕಾರು, ಇಬ್ಬರಿಗೆ ಗಾಯ
ತುಮಕೂರು: ಕಾರೊಂದು ಚರಂಡಿಗೆ ಉರುಳಿದ ಘಟನೆ ನಗರದ ಅಮರಜ್ಯೋತಿ ನಗರದಲ್ಲಿ ನಡೆದಿದೆ.
ಅಮರ ಜ್ಯೋತಿ ನಗರದಲ್ಲಿರುವ ರಾಮಕೃಷ್ಣ ಆಶ್ರಮದ ಹಿಂಭಾಗದಲ್ಲಿರುವ ಚರಂಡಿಗೆ ಭಾನುವಾರ ಬೆಳಗ್ಗೆ ಕಾರು ಉರುಳಿದ ಪರಿಣಾಮ ಇಬ್ಬರಿಗೆ ತೀವ್ರ ಗಾಯಗಳಾಗಿವೆ.
ಗಾಯಗೊಂಡವರನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಟ್ರಾಫಿಕ್ ಎಸ್‌ಐ ಶಿವಣ್ಣ ಆಗಮಿಸಿ ಕಾರನ್ನು ತೆರವುಗೊಳಿಸಿದರು.