ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿದ್ದೆಗೆಟ್ಟು ಓದದೇ, ಇಷ್ಟಪಟ್ಟು ಓದಿ

Parashurama
Updated On : 17 Feb 2013, 11:38 am

ಮಧುಗಿರಿ: ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ನಿದ್ದೆಗೆಟ್ಟು ಓದದೇ, ಆತ್ಮವಿಶ್ವಾಸದಿಂದ ಇಷ್ಟಪಟ್ಟು ಓದಬೇಕು.ಮನುಷ್ಯನಿಗೆ ಊಟ ಮತ್ತು ನಿದ್ದೆ ಇಂಧನವಿದ್ದಂತೆ ಎಂದು  ನಿವೃತ್ತ ಪ್ರಾಂಶುಪಾಲ ಕೆ.ರಂಗನಾಥ್ ಕರೆ ನೀಡಿದರು.
ತಾಲೂಕಿನ ದಂಡಿನದಿಬ್ಬ ಸರ್ಕಾರಿ ಸ್ವತಂತ್ರ ಪಪೂ ಕಾಲೇಜು ಆವರಣದಲ್ಲಿ 2012-13ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ  ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜ್ಞಾನರ್ಜನೆಗೆ ಅಧಿಕ ಒತ್ತು ಕೊಡಬೇಕು. ಸಕಾಲಕ್ಕ ಊಟ, ನಿದ್ದೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಸದಾ ಕಾಲ ಚಟುವಟಿಕೆಯಿಂದ ಅಂದಂದಿನ ಪಾಠ ಪ್ರವಚನಗಳನ್ನು ಗಮನವಿಟ್ಟು ಓದಿದಾಗ ವಿದ್ಯೆ ತಾನಾಗೇ ಒಲಿಯುತ್ತದೆ ಎಂದ ಅವರು,ಪಿಯುಸಿ ಹಂತ ಜೀವನದಲ್ಲಿ  ಮಹತ್ವದ ತಿರುವು ಪಡೆಯುತ್ತದೆ. ಈ ಹಂತದಲ್ಲಿ ಎಚ್ಚರ ವಹಿಸಿ ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿಜ್ಞಾನದ ಅಗತ್ಯತೆಯಿದ್ದು, ಕಾಲೇಜಿನಲ್ಲಿರುವ ವಿಜ್ಞಾನ ವಿಭಾಗವನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಯೋಗಾಭ್ಯಾಸ ಪರಿಹಾರ: ಬಡವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ವಿಜ್ಞಾನದಿಂದ ಗುಣ ಪಡಿಸಲಾಗದ ಕೆಲ ರೋಗವನ್ನು ಯೋಗಭ್ಯಾಸದಿಂದ ಗುಣಪಡಿಸಬಹುದು. ಇಂದಿನ ದಿನಗಳಲ್ಲಿ ಹೆಚ್ಚು ಜನರು ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗೆ ತುತ್ತಾಗಿ ನರಳುತ್ತಿದ್ದು ಇದಕ್ಕೆ ಧ್ಯಾನ, ಯೋಗಭ್ಯಾಸ ಪರಿಹಾರ ಎಂದರು.
ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸದಸ್ಯ ರಶ್ಮಿ ನಾಗೇಂದ್ರ, ವಿದ್ಯಾರ್ಥಿ ಜೀವನ ಸುಂದರ ಜೀವನ. ಅದರ ಸದ್ಬಳಕೆ ನಿಮ್ಮ ಕೈಯಲ್ಲಿದೆ ಎಂದರು. ಕಾಲೇಜು ಪ್ರಾಂಶುಪಾಲ ಜಿ.ಡಿ.ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಕೆ.ರಂಗನಾಥ್ ದಂಪತಿ, ಡಾ.ರಾಘವೇಂದ್ರ, ಬಡವನಹಳ್ಳಿ ಎಎಸ್‌ಐ ಪಾರ್ಥಸಾರಥಿ ಇವರನ್ನು ಎನ್‌ಎಸ್‌ಎಸ್ ವತಿಯಿಂದ ಸನ್ಮಾನಿಸಲಾಯಿತು.
ಉಪನ್ಯಾಸಕ ಕೆ.ಎ. ಮಲ್ಲಿಕಾರ್ಜುನ, ಆರ್. ನಾಗೇಂದ್ರ ಕಾಲೇಜು ವಾರ್ಷಿಕ ವರದಿ ಓದಿದರು. ದೊಡ್ಡೇರಿ ಗ್ರಾ.ಪಂ.ಅಧ್ಯಕ್ಷೆ ಸಿದ್ಧಗಂಗಮ್ಮ, ಉಪಾಧ್ಯಕ್ಷೆ ವಸಂತಕುಮಾರ್ ಹಾಗೂ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. ವೇದಾವತಿ ಪ್ರಾಥಿಸಿದರು. ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಗೀತೆ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement