ಸೇವಾಲಾಲ್ ಸ್ವಾಮೀಜಿಯವರ ಜಯಂತಿ ಪ್ರಯುಕ್ತ ಸಿಹಿ ವಿತರಣೆ
ತಿಪಟೂರು: ಶ್ರೀ ಸೇವಾಲಾಲ್ ಸ್ವಾಮೀಜಿಯವರ 274ನೇ ಜಯಂತಿ ಅಂಗವಾಗಿ ತಾಲೂಕಿನ ಎಲ್ಲಾ ಲಂಬಾಣಿ ತಾಂಡ್ಯಗಳಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ತಾ.ಶ್ರೀ ಸೇವಾಲಾಲ್ ಲಂಬಾಣಿ ಸಂಘದ ವತಿಯಿಂದ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ತಾ.ಅಧ್ಯಕ್ಷ ಬಿ.ಟಿ.ಕುಮಾರ್, ಉಪಾಧ್ಯಕ್ಷರಾದ ಬಾಬುನಾಯ್ಕ, ನಟರಾಜ್,ಪ್ರ.ಕಾರ್ಯದರ್ಶಿ ರಾಮನಾಯ್ಕ, ಸಹ ಕಾರ್ಯದರ್ಶಿ ಚಂದ್ರಶೇಖರನಾಯ್ಕ, ನಾಗರಾಜನಾಯ್ಕ, ಮಂಜುನಾಥ್, ಕಿರಣ್, ಉಮೇಶ್, ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.