ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

24ರಂದು 2ನೇ ಸುತ್ತಿನ ಪೋಲಿಯೋ

Lingaraj Badiger
Updated On : 22 Feb 2013, 11:08 am

ತುಮಕೂರು: ಫೆ.24 ರಿಂದ 27 ರವರೆಗೆ ನಡೆಯಲಿರುವ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಿಮಿತ್ತ 5 ವರ್ಷದ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸುವಂತೆ ಜಿಲ್ಲಾಧಿಕಾರಿ ಆರ್.ಕೆ.ರಾಜು  ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ 5 ವರ್ಷದ ಮಕ್ಕಳ ಗುರಿ 295418 ಇದ್ದು, 1201 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿರುತ್ತದೆ. 40 ಲಸಿಕಾ ಕೇಂದ್ರಗಳು ಜನನಿಬಿಡ ಸ್ಥಳಗಳಾದ ಬಸ್‌ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸಲಿದ್ದು, ನಿರ್ಗಮ ಪ್ರದೇಶ ಹಾಗೂ ವಲಸೆ ತಾಣಗಳ ಮಕ್ಕಳಿಗೆ ಲಸಿಕೆ ನೀಡಲು 4 ಸಂಚಾರಿ ತಂಡಗಳು ಕಾರ್ಯ ನಿರ್ವಹಿಸುವವು ಎಂದು ಅವರು ತಿಳಿಸಿದ್ದಾರೆ.

ಪ್ರಾತಿನಿಧ್ಯಕ್ಕೆ ಆಗ್ರಹ
ತುಮಕೂರು: ಜಿಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕನಿಷ್ಟ 25 ಸ್ಥಾನಗಳನ್ನು ಹಿಂದುಳಿದ ವಿಶ್ವಕರ್ಮ ಜನಾಂಗಕ್ಕೆ ನೀಡುವಂತೆ ಜನಾಂಗದ ಕಾರ್ಯದರ್ಶಿ ಎಂ.ಬಿ.ಕೃಷ್ಣ ಕೋರಿದ್ದಾರೆ. ಕಳೆದ 60  ವರ್ಷಗಳಿಂದಲೂ ಯಾವೊಂದು ರಾಜಕೀಯ ಪಕ್ಷವೂ ವಿಶ್ವಕರ್ಮ ಜನಾಂಗಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಕೇವಲ ಜನಾಂಗವನ್ನು ಓಟ್‌ಬ್ಯಾಂಕ್ ಆಗಿಯೇ ನೋಡುತ್ತಾ ಬರಲಾಗಿದೆ. ಈಗಲಾದರೂ ಅವಕಾಶ ನೀಡುವಂತೆ ಕೃಷ್ಣ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement