ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಮಚಂದ್ರ ಸ್ವಾಮಿ ದೇವಾಲಯ ಲೋಕಾರ್ಪಣೆ

Lingaraj Badiger
Updated On : 22 Feb 2013, 11:03 am

ಕುಣಿಗಲ್: ಭಾರತವು ಧರ್ಮಾಧರಿತ ಕರ್ಮ ಪ್ರದಾನ ದೇಶವಾಗಿದೆ, ಯಾವುದೇ ಕರ್ಮಗಳು ಧರ್ಮಾಧರಿತವಾಗಿ ಎಲ್ಲಿಯವೆರಗೂ ನಡೆಯುತ್ತದೆಯೋ ಅಲ್ಲಿಯವರೆಗೂ ದೇಶ ಸುಭಿಕ್ಷವಾಗಿರುತ್ತದೆ ಎಂದು ವಿದ್ವಾನ್ ಶೇಷಾದ್ರಿಭಟ್ಟರ್ ತಿಳಿಸಿದರು.
ಗುರುವಾರ, ತಾಲೂಕಿನ ಹುತ್ರಿದುರ್ಗ ಹೋಬಳಿಯ ಸಿದ್ದೇಮಣ್ಣಿನಪಾಳ್ಯ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ, ಕೋದಂಡ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ವಿಘ್ನೇಶ್ವರ, ನವಗ್ರಹ ಹಾಗೂ ಆಂಜನೇಯ ಸಮೇತ ಕೋದಂಡರಾಮಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾನವ ಕುಲದ ಅಭ್ಯುದಯಕ್ಕೆ ಎಲ್ಲಾ ಧರ್ಮಗಳು ಉತ್ತಮ ತತ್ವ ನೀಡಿವೆ. ಆವನ್ನು, ಜನತೆಗೆ ಅಯಾ ಧರ್ಮಗಳ ಗುರುಗಳು ಸರಳ ಮಾರ್ಗದಲ್ಲಿ ತಿಳಿಹೇಳುವ ಮೂಲಕ, ಜನತೆಯಲ್ಲಿ ಶಾಂತಿ, ನೆಮ್ಮದಿ ಸಾಧ್ಯವಾಗಲಿದೆ ಎಂದರು.
ಚನ್ನಪಟ್ಟಣದ ರಜತಾದ್ರಿ ಭಜನಾ ಮಂಡಳಿ ಹಾಗೂ ಮೈಸೂರು ಮೇಟಗಳ್ಳಿಯ ಶೇಷಾದ್ರಿ ಭಜನಾ ಮಂಡಳಿಯಿಂದ ಆಕರ್ಷಕ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆಂಜನಪ್ಪ, ಮಾಜಿ ಅಧ್ಯಕ್ಷ ಚಿಕ್ಕರಂಗಯ್ಯ, ತಾಲೂಕು ಅಧ್ಯಕ್ಷ ರಾಮಚಂದ್ರಯ್ಯ, ಉಪಾಧ್ಯಕ್ಷ ರೇವಣ್ಣಸಿದ್ದಯ್ಯ, ಮುಕುಂದರಾಜ್, ಸಾಹಿತಿ ವೈ.ಜಿ.ವೆಂಕಟೇಶಯ್ಯ, ಕಸಾಪ ಅಧ್ಯಕ್ಷ ದಿನೇಶ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ನಂಜುಂಡಯ್ಯ ಅ.ರಾಜಣ್ಣ, ಮಾಜಿ ಉಪಾಧ್ಯಕ್ಷ ರಂಗಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement