ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶನೈಶ್ಚರಸ್ವಾಮಿ ಜಾತ್ರೆ ಇಂದಿನಿಂದ

Lingaraj Badiger
Updated On : 22 Feb 2013, 11:04 am

ತಿಪಟೂರು: ತಾಲೂಕಿನ ರಂಗನಹಳ್ಳಿಯಲ್ಲಿ ಶನೈಶ್ಚರ ಸ್ವಾಮಿ ಸೇವಾ ಸಮಿತಿ ವತಿಯಿಂದ ಶನೇಶ್ವರಸ್ವಾಮಿ, ಆಂಜನೇಯಸ್ವಾಮಿ ಮತ್ತು ದುರ್ಗಾಪರಮೇಶ್ವರಿ ದೇವಿಯವರ 9ನೇ ವರ್ಷದ ಜಾತ್ರಾ ಮಹೋತ್ಸವ ಇಂದಿನಿಂದ ಫೆ.23ರವೆರೆಗೆ ನಡೆಯಲಿದೆ. ಫೆ.22ರಂದು ಸ್ವಾಮಿಯವರಿಗೆ ಅಭಿಷೇಕ, ನವಗ್ರಹ ಹೋಮ, ದುರ್ಗಾಪರಮೇಶ್ವರಿ ಹೋಮ, ಬಾಗಿನ ಸೇವೆ, ದೇವಿಯವರಿಗೆ ಅಲಂಕಾರ, ಅಗ್ನಿಕೊಂಡ ಪೂಜೆ ಹಾಗೂ ಅಗ್ನಿಕುಂಡ ಪ್ರವೇಶ ಮತ್ತು ಅಮೋಘ ಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ.  ಫೆ.23ರಂದು ಗಣಪತಿ ಪೂಜೆ, ಅಭಿಷೇಕ ಹಾಗೂ ಮಧ್ಯಾಹ್ನ 12ಗಂಚೆಗೆ ಧಾರ್ಮಿಕ ಸಮಾರಂಭ ನಡೆಯಲಿದ್ದು, ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರುಪರದೇಶಿಕೇಂದ್ರ ಸ್ವಾಮೀಜಿ, ನೊಣವಿನಕೆರೆಯ ಶಿವಯೋಗೀಶ್ವರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತಿತರರು ಭಾಗವಹಿಸಲಿದ್ದಾರೆ. ಅಂದೇ ರಾತ್ರಿ 9.30ಕ್ಕೆ 'ರಾಜ ಸತ್ಯವ್ರತ' ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.
ಗುಬ್ಬಿ: 10 ನಾಮಪತ್ರ
ಗುಬ್ಬಿ: ಗುಬ್ಬಿ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ  ಪ್ರಾರಂಭವಾಯಿತು. ಗುರುವಾರ 10 ಅಭ್ಯರ್ಥಿಗಳ ಅರ್ಜಿ ಸ್ವೀಕೃತಗೊಳ್ಳುವ ಮೂಲಕ ಚಾಲನೆ ದೊರೆಯಿತು. ಕಾಂಗ್ರೆಸ್‌ನ 6, ಬಿಜೆಪಿ 3 ಅಭ್ಯರ್ಥಿಗಳು, ಹಾಗೂ ಜೆಡಿಎಸ್‌ನ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement