ಶಶಿಧರಗೌಡ ಶಿರಾ ಎಪಿಎಂಸಿ ಅಧ್ಯಕ್ಷ
ಶಿರಾ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಆರ್.ಶಶಿಧರಗೌಡ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ರಾಜಣ್ಣ ಆಯ್ಕೆಯಾಗಿದ್ದು, ಇಬ್ಬರೂ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಬಂಡೆ ರಾಮಕೃಷ್ಣ, ಕಾಂಗ್ರೆಸ್‌ನಿಂದ ಎಂ.ಆರ್.ಶಶಿಧರಗೌಡ ನಾಮಪತ್ರ ಸಲ್ಲಿಸಿದ್ದರು. ಇಬ್ಬರಿಗೂ ಸಮಾನ ಮತ ಬಂದಾಗ ಲಾಟರಿ ಮುಖಾಂತರ ಎಂ.ಆರ್.ಶಶಿಧರಗೌಡ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೂ ಜೆಡಿಎಸ್‌ನಿಂದ ನಾಗರತ್ನಮ್ಮ, ಕಾಂಗ್ರೆಸ್‌ನಿಂದ ರಾಜಣ್ಣ ನಾಮಪತ್ರ ಸಲ್ಲಿಸಿದ್ದು, ಇಬ್ಬರಿಗೂ ಸಮಾನ ಮತ ಬಂದಾಗ ಲಾಟರಿ ಮುಖಾಂತರ ರಾಜಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ್ ಕಾಂತರಾಜು ಕಾರ್ಯ ನಿರ್ವಹಿಸಿದರು.