ಅಕ್ಷಯ ನರ್ಸಿಂಗ್ ಹೋಂಗೆ ಮುತ್ತಿಗೆ ಹಾಕಿ ಪ್ರತಿಭಟನೆ
ತುಮಕೂರು: ವಾಂತಿ ಭೇದಿಯಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಹಸುಗೂಸಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಆ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ ಪೋಷಕರು ಆಕ್ರೋಶಗೊಂಡು ನಗರದ ಅಕ್ಷಯ ನರ್ಸಿಂಗ್ ಹೋಂ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇಲ್ಲಿನ ದಿಬ್ಬೂರು ನಿವಾಸಿಗಳಾದ ರಾಜೇಂದ್ರ ರೂಪ ದಂಪತಿಯ ನಾಲ್ಕು ತಿಂಗಳ ಹಸುಗೂಸು ವಾಂತಿಭೇದಿಯಿಂದ ಬಳಲುತ್ತಿತ್ತು.
ಇದರಿಂದ ಗಾಬರಿಗೊಂಡ ರಾಜೇಂದ್ರ ರೂಪ ದಂಪತಿ ಕೂಡಲೇ ಅಕ್ಷಯ ನರ್ಸಿಂಗ್ ಹೋಂಗೆ ಚಿಕಿತ್ಸೆಗೆಂದು ದಾಖಲಿಸಿದ್ದರು.
ಆದರೆ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿರುವ ಪೋಷಕರು ಹಾಗೂ ಅವರ ಸಂಬಂಧಿಗಳು ಆಸ್ಪತ್ರೆಗೆ ಮುತ್ತಿಗೆ ಹಾಕಿ ನಾಮಫಲಕಕ್ಕೆ ಮಸಿ ಬಳೆದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.