ತುರುವೇಕೆರೆ ಒಟ್ಟು 65 ನಾಮಪತ್ರ ಸ್ವೀಕಾರ
ತುರುವೇಕೆರೆ: ಸ್ಥಳೀಯ ಪಟ್ಟಣ ಪಂಚಾಯ್ತಿಯ 14 ವಾರ್ಡ್ ಗಳಿಗೆ 64 ಮಂದಿಯಿಂದ 65 ನಾಮಪತ್ರ ಸಲ್ಲಿಸಲಾಗಿದೆ.
ಕಾಂಗ್ರೆಸ್, ಜೆಡಿಎಸ್ ತಲಾ 14 ವಾರ್ಡ್ಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 13, ಕೆಜೆಪಿ 11 ಹಾಗೂ ಬಿಎಸ್ಆರ್ ಪಕ್ಷ 9 ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಇಳಿಸಿದೆ. ಮೂವರು ಸ್ವತಂತ್ರ್ಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ನ ಹುರಿಯಾಳುಗಳು ಶಶಿಶೇಖರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್. ಶಿವರಾಜ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು. ಇಂದು ಕೆಜಿಪಿಯ ಬಹುಪಾಲು ಅಭ್ಯರ್ಥಿಗಳು ಕೆಜೆಪಿ ಮುಖಂಡರಾದ ಎಂ.ಡಿ.ಮೂರ್ತಿ ಹಾಗೂ ಕೆಜೆಪಿಯ ವಿಧಾನಸಭಾ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಮಸಾಲಾ ಜಯರಾಂ ಅವರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್ನ ಅಭ್ಯರ್ಥಿಗಳು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು. ಬಿಜೆಪಿಯ ಅಭ್ಯರ್ಥಿಗಳು ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಸ್. ಬೋರೇಗೌಡ, ಪಟ್ಟಣ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಮಂಜುನಾಥ್ ಅವರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು. ಬಿ ಎಸ್ಆರ್ನ ಅಭ್ಯರ್ಥಿಗಳು ಎಚ್.ಆರ್.ರಾಮೇಗೌಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು.
ಅಭ್ಯರ್ಥಿಗಳು: ವಾರ್ಡ್ ಸಂಖ್ಯೆ 1 - ಟಿ.ಪಿ.ಮಹೇಶ್ (ಕಾಂಗ್ರೆಸ್), ಎನ್.ಆರ್. ಸುರೇಶ್ (ಜೆಡಿಎಸ್), ಪ್ರಕಾಶ್ (ಬಿಜೆಪಿ),ತೇಜಸ್ (ಕೆಜೆಪಿ), ಅರುಣ್ ಕುಮಾರ್ (ಬಿಎಸ್ಆರ್) ಚಿದಾನಂದ್ (ಸ್ವತಂತ್ರ್ಯ). ವಾರ್ಡ್ ನಂ 2 - ಶ್ರೀನಿವಾಸ್ ಮೂರ್ತಿ (ಕಾಂಗ್ರೆಸ್), ಕೃಷ್ಣಮೂರ್ತಿ (ಜೆಡಿಎಸ್), ಟಿ.ಮಂಜುನಾಥ್ (ಬಿಜೆಪಿ), ಟಿ.ಎನ್.ಬಸವರಾಜು (ಬಿ ಎಸ್ ಆರ್) ಚಿದಾನಂದ್ (ಸ್ವತಂತ್ರ್ಯ). ವಾರ್ಡ್ ಸಂಖ್ಯೆ 3 - ನವೀನ್ (ಕಾಂಗ್ರೆಸ್), ಕೆ.ರವಿ (ಜೆಡಿಎಸ್), ರಂಗಸ್ವಾಮಿ (ಬಿಜೆಪಿ), ನದೀಂ (ಕೆಜೆಪಿ ), ಮಷೀರ್ ಅಹಮದ್ (ಬಿ ಎಸ್ಆರ್). ವಾರ್ಡ್ ಸಂಖ್ಯೆ 4 - ಶರಾವತಿ (ಕಾಂಗ್ರೆಸ್), ಸುಮಲತಾ (ಜೆಡಿಎಸ್), ಸೈತ್ರಮ್ಮ (ಬಿಜೆಪಿ), ಶಶಿಕಲಾ (ಕೆಜೆಪಿ ), ವಾರ್ಡ್ ಸಂಖ್ಯೆ 5 -ಗಂಗಮ್ಮ (ಕಾಂಗ್ರೆಸ್), ಮಾನಸಾ (ಜೆಡಿಎಸ್), ಶಶಿಕಲಾ (ಬಿಜೆಪಿ), ರಾಜಮ್ಮ (ಕೆಜೆಪಿ ), ಕಮಲ (ಬಿಎಸ್ಆರ್). ವಾರ್ಡ್ ಸಂಖ್ಯೆ 6 - ಪಾರ್ವತಮ್ಮ (ಕಾಂಗ್ರೆಸ್), ತಬಸಮ್ (ಜೆಡಿಎಸ್), ನಂದಿನಿ (ಬಿಜೆಪಿ), ಸುನಂದ (ಕೆಜೆಪಿ). ವಾರ್ಡ್ ಸಂಖ್ಯೆ 7 - ಶೌಕತ್ ಆಲಿ (ಕಾಂಗ್ರೆಸ್), ವಿಜಯಕುಮಾರ್ (ಜೆಡಿಎಸ್),ಎಸ್.ರಾಜು (ಬಿಜೆಪಿ). ವಾರ್ಡ್ ಸಂಖ್ಯೆ 8 -ರೇವಣ್ಣ (ಕಾಂಗ್ರೆಸ್), ನಾರಾಯಣ್ (ಜೆಡಿಎಸ್), ಲಕ್ಷ್ಮೀನರಸಿಂಹ (ಕೆಜೆಪಿ), ಪಾಂಡುರಂಗ (ಬಿಎಸ್ ಆರ್).ವಾರ್ಡ್ ಸಂಖ್ಯೆ 9 - ಎಂ.ಎನ್.ಆಶಾ (ಕಾಂಗ್ರೆಸ್), ಕೆ.ಬಿ.ರಾಜಾಮಣಿ (ಜೆಡಿಎಸ್), ಕೆ.ಎಂ.ಉಮಾ (ಬಿಜೆಪಿ), ಲೀಲಾ (ಕೆಜೆಪಿ ), ಮಂಜುಳಾ (ಬಿಎಸ್ಆರ್). ವಾರ್ಡ್ ಸಂಖ್ಯೆ 10 -ಪ್ರಭಾಕರ್ (ಕಾಂಗ್ರೆಸ್), ಟಿ.ಜೆ.ಮನುಕುಮಾರ್ (ಜೆಡಿಎಸ್), ಪಾಲಕುಮಾರ್ (ಬಿಜೆಪಿ), ಗೋಪಿನಾಥ್ (ಕೆಜೆಪಿ ), ರಾಘವೇಂದ್ರ (ಬಿ ಎಸ್ ಆರ್). ವಾರ್ಡ್ ಸಂಖ್ಯೆ 11 - ಹೇಮಲತಾ (ಕಾಂಗ್ರೆಸ್), ನಮೃತಾ (ಜೆಡಿಎಸ್), ಅನ್ನಪೂರ್ಣಮ್ಮ (ಬಿಜೆಪಿ), ಪುಷ್ಪಲತಾ (ಕೆಜೆಪಿ ).ವಾರ್ಡ್ ಸಂಖ್ಯೆ 12 - ಟಿ.ಎನ್. ಶಶಿಶೇಖರ್ (ಕಾಂಗ್ರೆಸ್), ಉಪೇಂದ್ರ (ಜೆಡಿಎಸ್), ಶ್ರೀನಾಥ್ ಪಂಡಿತ್ (ಬಿಜೆಪಿ), ಪುಟ್ಟರಾಜು (ಬಿಎಸ್ಆರ್) ಬಿ.ಹೆಚ್.ಶಿವನಂಜಯ್ಯ (ಸ್ವತಂತ್ರ್ಯ) ವಾರ್ಡ್ ಸಂಖ್ಯೆ 13 - ಕೆ.ಟಿ.ಶಿವಶಂಕರ್ (ಕಾಂಗ್ರೆಸ್), ದೇವರಾಜು (ಜೆಡಿಎಸ್), ರಾಮಚಂದ್ರಮೂರ್ತಿ (ಬಿಜೆಪಿ), ಶೇಖರ್ (ಕೆಜೆಪಿ). ಟಿ.ವಿ.ಚಂದ್ರಶೇಖರ್ (ಸ್ವತಂತ್ರ್ಯ). ವಾರ್ಡ್ ಸಂಖ್ಯೆ 14 - ಲೀಲಾವತಿ (ಕಾಂಗ್ರೆಸ್), ಶರಾವತಿ (ಜೆಡಿಎಸ್), ನಾಗರತ್ನಮ್ಮ (ಬಿಜೆಪಿ), ಆಶಾರಾಣಿ (ಕೆಜೆಪಿ ), ಜಯಲಕ್ಷ್ಮಮ್ಮ (ಬಿ ಎಸ್ ಆರ್). ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.
25 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.