ನಾಳೆಯಿಂದ ಸಂಸ್ಕ ೃತಿ ಉತ್ಸವ
ತುಮಕೂರು: ಇಲ್ಲಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಫೆ.26 ರಿಂದ ಮಾರ್ಚ್ 1 ರವರೆಗೆ ಪ್ರತಿ ದಿನ ಸಂಜೆ 5 ರಿಂದ ರಾತ್ರಿ 9 ರವರೆಗೆ ನಾಟಕಮನೆ ವತಿಯಿಂದ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. 26 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್ ನೆರವೇರಿಸುವರು. ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾಡಶೆಟ್ಟಿಹಳ್ಳಿ ಸತೀಶ್ ಆಗಮಿಸುವರು. ಇದೇ ಸಂದರ್ಭ ಗೋವಿಂದಾಯನಮಃ, ಕವಿ ವರ್ಸಸ್ ಕಲಿ, ಭೀಷ್ಮ, ನಾಟಕ ಪ್ರದರ್ಶನಗೊಳ್ಳಲಿದೆ. ಮಾ.1ರಂದು ನಡೆಯಲಿರುವ ಅಭಿನಂದನೆ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಿ.ಟಿ. ಮುನಿರಾಜಯ್ಯ ವಹಿಸಲಿದ್ದಾರೆ.
ಧನಿಯಾಗೆ
ಸನ್ಮಾನ
ತುಮಕೂರು: ಕೆಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ನೇಮಕಗೊಂಡಿರುವ ಧನಿಯಾಕುಮಾರ್‌ರನ್ನು ಕನ್ನಡ ಸೇನೆ ವತಿಯಿಂದ ಗೌರವಿಸಲಾಯಿತು. ಕನ್ನಡ ಸೇನೆ ಅಧ್ಯಕ್ಷೆ ಆಶಾ ಕಾಶಿನಾಥ್, ಆರ್.ಎನ್.ವೆಂಕಟಾಚಲ, ವಿಠ್ಠಲ್, ಲಿಯಾಖತ್ ಆಲಿ, ಜ್ಯೋತಿ, ನಾಗರತ್ನ, ರಾಧ, ಕೇಶವಮೂರ್ತಿ, ನಾಗರಾಜು, ನಾಣಿ ಇತರರಿದ್ದರು.