ವ್ಯಕ್ತಿ ನಾಪತ್ತೆ
ತುಮಕೂರು: ಜಿಲ್ಲೆಯ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾವುಕೆರೆಯಿಂದ ರಾಮಯ್ಯ ಎಂಬುವರು ಕಳ್ಳಂಬೆಳ್ಳ ಹೋಬಳಿ ಜೋಗಿಹಳ್ಳಿಗೆ ಹೋಗಿ ಬರುತ್ತೇವೆಂದು ಕಳೆದ ಅಕ್ಟೋಬರ್ 14 ರಂದು ಹೋದವರು ಇಲ್ಲಿಯವರೆಗೂ ಬಂದಿಲ್ಲ. ಇವರಿಗೆ 71 ವರ್ಷ ವಯಸ್ಸು, 5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಎಣ್ಣೆಗೆಂಪು ಬಣ್ಣ, ದುಂಡು ಮುಖ ಇರುವ ಇವರು ಕನ್ನಡ ಮಾತನಾಡುತ್ತಾರೆ. ಇವರು ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ.
ಇಂದು ಬ್ರಹ್ಮರಥೋತ್ಸವ
ಕೊರಟಗೆರೆ: ತುಮಕೂರು ತಾಲೂಕು ಮಿಂಚಕಲ್ ಗೊಲ್ಲಹಳ್ಳಿ (ಅಯ್ಯನ ಗುಡಿ)ಶ್ರೀ ಆಂಜನೇಯಸ್ವಾಮಿರವರ ಬ್ರಹ್ಮರಥೋತ್ಸವವು ಸೋಮವಾರ ಮಧ್ಯಾಹ್ನ 1.30 ಕ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬಿ ಫಾರಂ ಅನ್ಯರ ಪಾಲು
ಅರಸೀಕೆರೆ: ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಶನಿವಾರ ಕೆಲವು ಪಕ್ಷಗಳಲ್ಲಿ ಅಭ್ಯರ್ಥಿಗಳಿಲ್ಲದೆ ಕಡೇ ಗಳಿಗೆಯವರೆಗೆ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದ್ದರೆ, ಪ್ರಮುಖ ಅಭ್ಯರ್ಥಿಗಳಿಗಾಗಿ ಕಾಯ್ದಿರಿಸಿದ್ದ ಬಿ ಫಾರಂ ಕೊನೆ ಗಳಿಗೆಯಲ್ಲಿ ಅವರು ಬಾರದೆ ಬೇರೆಯವರ ಪಾಲಾಯಿತು. ಇನ್ನು ಕೆಲವು ರಾಜಕೀಯ ಪಕ್ಷಗಳಲ್ಲಿ ಬಿ ಫಾರಂ ಹಂಚಿಕೆಯ ಗೊಂದಲ ಅಂತಿಮ ಕ್ಷಣದವರೆಗೂ ಮುಂದುವರೆದಿತ್ತು. ಇದರಿಂದಾಗಿ ಒಂದೇ ಪಕ್ಷದಿಂದ ಸ್ಪರ್ಧಿಸಲು ಬಯಸಿದ್ದ ಆಕಾಂಕ್ಷಿಗಳಲ್ಲಿ ತಳಮಳ ಹೆಚ್ಚಾಗಿದ್ದರೆ ಕೆಲ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಸೂಕ್ತ ದಾಖಲೆ ಸಲ್ಲಿಸಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.