ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚಿ.ನಾ.ಹಳ್ಳಿ ಪುರಸಭೆ: ಕಣದಲ್ಲಿ 72 ಮಂದಿ

Parashurama
Updated On : 27 Feb 2013, 11:38 am

ಚಿಕ್ಕನಾಯಕನಹಳ್ಳಿ:  ಮಾರ್ಚ್ 7 ರಂದು ನಡೆಯಲಿರುವ ಪುರಸಭೆ ಚುನಾವಣೆಗೆ 72 ಮಂದಿ ಕಣದಲ್ಲಿ ಉಳಿದಿದ್ದಾರೆ. ನಾಮ ಪತ್ರ ಹಿಂಪಡೆಯುವ ಅಂತಿಮ ದಿನವಾದ ಬುಧವಾರ ಅರ್ಜಿಸಲ್ಲಸಿದ್ದ 82 ಜನರಲ್ಲಿ 10 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು,ಅಂತಿಮವಾಗಿ ಕಣದಲ್ಲಿ 72 ಮಂದಿ ಉಮೇದುವಾರರು ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆದ 10 ಮಂದಿಯಲ್ಲಿ ಎರಡು ಕೆಜೆಪಿ ಪಕ್ಷದವರಾಗಿದ್ದು, ಉಳಿದ 8 ಜನ ಪಕ್ಷೇತರರಾಗಿದ್ದಾರೆ. ವಾರ್ಡ್ 1ರಲ್ಲಿ 2 ನಾಮಪತ್ರ ಹಿಂಪಡೆದಿದ್ದರೆ, 5ರಲ್ಲಿ 1 ,11ರಲ್ಲಿ 1,12ರಲ್ಲಿ 2,13ರಲ್ಲಿ 1,15ರಲ್ಲಿ 1,16ರಲ್ಲಿ2 ನಾಮಪತ್ರ ಹಿಂಪಡೆಯಲಾಗಿದೆ. ಕಣದಲ್ಲಿ 72 ಮಂದಿ ಹುರಿಯಾಳುಗಳು ಉಳಿದಿದ್ದಾರೆ ಎಂದು ತಹಶೀಲ್ದಾರ್ ಕೃಷ್ಣಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement