ಪಾವಗಡ ಪುರಸಭೆ: 105 ಮಂದಿ ಕಣದಲ್ಲಿ
ಪಾವಗಡ: ಪುರಸಭೆ ಚುನಾವಣೆ ಸಂಬಂಧ ಪಟ್ಟಣದ 23ವಾರ್ಡುಗಳಿಂದ ಸುಮಾರು 167ಮಂದಿ ಆಕಾಂಕ್ಷಿ ನಾಮ ಪತ್ರಗಳು ಸಲ್ಲಿಸಿದ್ದು, ನಾಮ ಪತ್ರಗಳು ವಾಪಸ್ ಪಡೆಯಲು ಕೊನೆಯ ದಿನವಾದ ಬುಧವಾರ 37ಮಂದಿ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 105 ಮಂದಿ ಕಣದಲ್ಲಿದ್ದಾರೆ.
ಪಟ್ಟಣದ ಪ್ರತಿಷ್ಠಿತ 3ನೇ ವಾರ್ಡುನಲ್ಲಿ ಕಾಂಗ್ರೆಸ್ನಿಂದ ಮಾನಂ ವೆಂಕಟಸ್ವಾಮಿ ಕಣದಲ್ಲಿದ್ದು, ಟಿಕೆಟ್ ಸಿಗದ ಕಾರಣ 8ನೇ ವಾರ್ಡಿನಿಂದ ಸಮಾಜ ಸೇವಕಿ ಹಾಗೂ ಸ್ವ ಸಹಾಯ ಸಂಘಗಳ ಪ್ರತಿನಿಧಿ ಲಕ್ಷ್ಮೀದೇವಿ ರಾಮಾಂಜಿನಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದಾರೆ. ವಾರ್ಡು ನಂ17ರಲ್ಲಿ ಜೆಡಿಎಸ್ನಿಂದ ನಾರಾಯಣಪ್ಪ, ಬಿಜೆಪಿಯಿಂದ ರವಿ, ಕಾಂಗ್ರೆಸ್ನಿಂದ ಬಿ.ಶ್ರೀನಿವಾಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಪಿ.ವಿ.ನಾಗರಾಜ್, ರಾಮಾಂಜಿನಪ್ಪ, ಲೋಕೇಶ್ ಸೇರಿದಂತೆ ಒಟ್ಟು 6 ಮಂದಿ ಕಣದಲ್ಲಿದ್ದಾರೆ.
18ನೇ ವಾರ್ಡಿನಿಂದ ಜೆಡಿಎಸ್ನಿಂದ ಪಿ.ಎಂ ಮಹೇಶ್,ಕಾಂಗ್ರೆಸ್ನಿಂದ ಸಿದ್ದಯ್ಯ ಬಿಎಸ್ಆರ್ನಿಂದ ಗೋವಿಂದರಾಜ್, ಕೆಜೆಪಿಯಿಂದ ಬಾಲಜಿ ಕಣದಲ್ಲಿದ್ದಾರೆ. 19ನೇ ವಾರ್ಡಿನಿಂದ ಕಾಂಗ್ರೆಸ್ನಿಂದ ಪಾರ್ವತಮ್ಮ ಜೆಡಿಎಸ್ನಿಂದ ಗೌರಮ್ಮ, ಬಿಜೆಪಿಯಿಂದ ಲಕ್ಷ್ಮಮ್ಮ ಹಾಗೂ ಬಿಎಸ್ಆರ್ನಿಂದ ಸರೋಜಮ್ಮ ಸ್ವರ್ಧಿಸಿದ್ದಾರೆ. 20ನೇ ವಾರ್ಡ್ನಿಂದ ಕಾಂಗ್ರಸ್ನಿಂದ ರಾಮಾಂಜಿನಪ್ಪ ಜೆಡಿಎಸ್ನಿಂದ ರಾಮಚಂದ್ರಪ್ಪ ಬಿಜೆಪಿಯಿಂದ ವೆಂಕಟೇಶ್ ಬಿಎಸ್ಆರ್ನಿಂದ ರಾಮಾಂಜಿನಪ್ಪ ಕೆಜೆಪಿಯಿಂದ ಹನುಮಂತಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಟಿ.ನಾಗೇಶ್ ಕಣದಲ್ಲಿದ್ದಾರೆ.21ನೇ ವಾರ್ಡಿನಲ್ಲಿ ಕಾಂಗ್ರೆಸ್ನಿಂದ ಪಿ.ಅಂಜನ್ಕುಮಾರ್ ಜೆಡಿಎಸ್ನಿಂದ ಖಲಿದ್ ಹಾಗೂ 22ನೇ ವಾರ್ಡ್ ಜೆಡಿಎಸ್ನಿಂದ ಮಾಲಿನ್ತಾಜ್ ಕಾಂಗ್ರೆಸ್ನಿಂದ ಅನ್ನಪೂರ್ಣ ಕಣದಲ್ಲಿದ್ದಾರೆ.23ನೇ ವಾರ್ಡಿನಿಂದ ಬಿಜೆಪಿಯಿಂದ ಪಾರಿಜಾತ ಕಾಂಗ್ರೆಸ್ನಿಂದ ಅನಿತಾ ಜೆಡಿಎಸ್ನಿಂದ ಸುಮ ಅನಿಲ್, ಸ್ವತಂತ್ರ ಅಭ್ಯರ್ಥಿಗಳಾಗಿ ರಾಧಮ್ಮ, ವೀಣಾ ಸ್ಪರ್ಧಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.