ಹಿಂದುಳಿದ ತಾಲೂಕುಗಳಲ್ಲಿ ವಿಶೇಷ ಕಾಮಗಾರಿ
ಮೈಸೂರು: ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ವಿಶೇಷ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಪ್ರಾದೇಶಿಕ ಅಸಮಲೋತನ ನಿವಾರಣಾ ಉನ್ನತಾಧಿಕಾರ ಸಮಿತಿಯು ಗುರುತಿಸಿರುವ ಹಿಂದುಳಿದ ತಾಲೂಕುಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ 44.44 ಕೋಟಿ ಬಿಡುಗಡೆ ಮಾಡಿದೆ.
ಜಿಲ್ಲಾವಾರು ಅನುದಾನ ಬಿಡುಗಡೆಯ ವಿವರ ಕೋಟಿ ರು.ಗಳಲ್ಲಿ ಈ ಕೆಳಕಂಡಂತಿದೆ.
ಜಿಪಂ ಅಧ್ಯಕ್ಷರಿಗೆ ನಾಲ್ಕನೇ ತ್ರೈಮಾಸಿಕ ಅನುದಾನ
ರಾಜ್ಯದ ಎಲ್ಲಾ 30 ಜಿಲ್ಲೆಗಳ ಜಿಪಂ ಅಧ್ಯಕ್ಷರಿಗೆ ನಾಲ್ಕನೇ ತ್ರೈಮಾಸಿಕ ಅನುದಾನವಾಗಿ ತಲಾ 50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳು 2012-13ನೇ ಸಾಲಿನಲ್ಲಿ ಜಿಪಂ ಅಧ್ಯಕ್ಷರಿಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ವಾರ್ಷಿಕ 2 ಕೋಟಿ ನೀಡುವುದಾಗಿ ಪ್ರಕಟಿಸಿದ್ದರು. ಅದರಂತೆ ಈಗಾಗಲೇ ಮೂರು ಕಂತುಗಳಲ್ಲಿ ತಲಾ 50 ಲಕ್ಷಗಳಂತೆ 1.50 ಕೋಟಿ ಬಿಡುಗಡೆಯಾಗಿತ್ತು. ಗ್ರಾಮಸಭೆಗಳ ಶಿಫಾರಸಿನ ಕ್ರಿಯಾಯೋಜನೆಯನ್ನು ತಯಾರಿಸಿ ಜಿಪಂ ಅಧ್ಯಕ್ಷರ ಅನುಮೋದನೆ ಪಡೆದು, ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ವಾರ್ಷಿಕ ಕ್ರಿಯಾ ಯೋಜನೆ ಹಾಗೂ ಪ್ರಗತಿಯನ್ನು ಜಿಪಂ ವೆಬ್ಸೈಟ್ನಲ್ಲಿ ಅಳವಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ನಿರ್ದೇಶಕ ಪಿ. ಕುಮಾರ್ ಸೂಚಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.