2013-14 ಬಜೆಟ್ ಮಾತು
ಕೇಂದ್ರ ಹಣಕಾಸು ಸಚಿವರು 2013ರ ಬಜೆಟ್ನಲ್ಲಿ ದಲಿತ ವರ್ಗಗಳ ಸಮಗ್ರ ಅಭಿವೃದ್ಧಿಗೆ 41,561 ಕೋಟಿ ರು. ಮೀಸಲಿಟ್ಟಿರುವುದು ಸ್ವಾಗತಾರ್ಹ.
- ಕೆ.ಆರ್.ರಂಗನಾಥ, ದಲಿತ ಮುಖಂಡರು, ಕುಣಿಗಲ್
ಕೇಂದ್ರ ಹಣಕಾಸು ಸಚಿವರು ಮಂಡಿಸಿರುವ ಬಜೆಟ್ನಲ್ಲಿ, ದಿನಬಳಕೆ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಲೆ ಇದ್ದು ಬೆಲೆ ಏರಿಕೆ ನಿಯಂತ್ರಣ ದಿಸೆಯಲ್ಲಿ ಪ್ರಾಮಾಣಿಕ ಕ್ರಮ ಕೈಗೊಳ್ಳಬೇಕಿದೆ.
- ಜಯರಾಮಯ್ಯ, ಯುವಮುಖಂಡರು, ಹುಲಿಯೂರುದುರ್ಗ
ಕೇಂದ್ರ ಬಜೆಟ್ನಲ್ಲಿ ಯುವ ಜನಾಂಗಕ್ಕೆ ಹೆಚ್ಚು ಒತ್ತು ನೀಡಿ, ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ. ದೇಶದ ಜನಸಂಖ್ಯೆಯ ಬಹುಪಾಲು ಇರುವ ಯುವಜನಾಂಗದ ಅಭಿವೃದ್ಧಿಗೆ ಯೋಜನೆ ಮತ್ತಷ್ಟು ಪರಿಣಾಮಕಾರಿ ಅನುಷ್ಠಾನವಾಗಬೇಕಿದೆ.
- ಮಧುಸೂಧನ್, ಪದವಿ ವಿದ್ಯಾರ್ಥಿ
ಪ್ರಸಕ್ತ ಕೇಂದ್ರ ಅಯವ್ಯಯದಲ್ಲಿ ಭತ್ತದ ಬೆಳೆ ಮತ್ತಷ್ಟು ಹೆಚ್ಚು ಬೆಳೆಯಲು ಯೋಜನೆ ರೂಪಿಸಿ, ಸಾವಿರ ಕೋಟಿ ರು. ಅನುದಾನ ಮೀಸಲಿಟ್ಟಿರುವುದು , ಬತ್ತ ಬೆಳೆಯುವ ರೈತರಿಗೆ ಸಂತಸವಾಗಿದೆ.
- ರಮೇಶ್, ರೈತ, ಕುಣಿಗಲ್.
ಕೇಂದ್ರ ಬಜೆಟ್ನಲ್ಲಿ ತಡವಾಗಿಯಾದರೂ ಮಹಿಳೆಯರ ಬಗ್ಗೆ ಕಾಳಜಿ ವ್ಯಕ್ತವಾಗಿರುವುದು ಸ್ವಾಗತಾರ್ಹ. ಮಹಿಳೆಯರ ಅಭಿವೃದ್ಧಿಗೆ ಮೊದಲ ಬಾರಿಗೆ ಮಹಿಳಾ ಬ್ಯಾಂಕ್ ಸ್ಥಾಪನೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.
- ಗುಲ್ಜಾರ್
ಕೇಂದ್ರ ಸರ್ಕಾರ ಮುಂಬರುವ ಚುನಾವಣೆ ಮೇಲೆ ಕಣ್ಣಿಟ್ಟು ಹೊಸ ತೆರಿಗೆ ವಿಧಿಸದೇ ಯಥಾವತ್ತು ಕಾಪಾಡಿಕೊಂಡು ಬಂದಿದೆ. ಹಣಕಾಸು ಸಚಿವ ಪಿ.ಚಿದಂಬರ ಮಂಡಿಸಿರುವ ಬಜೆಟ್ ನಿರಾಶದಾಯಕ.
- ಆರ್.ಸಿ.ವಿಜಯ್ ಕುಮಾರ್ ಜೈನ್, ಮಂಡಿ ವ್ಯಾಪರಿಗಳು
ಕೇಂದ್ರ ಯುಪಿಎ ಸರ್ಕಾರ ಯುವಕರಿಗೆ, ಮಹಿಳೆಯರ ಕಲ್ಯಾಣಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಬಿಟ್ಟರೆ ಯಥಾ ಸ್ಥಿತಿ ಮುಂದುವರಿಸಿದ್ದಾರೆ. ಮೊಬೈಲ್, ಸಿಗರೇಟ್ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ತೆರಿಗೆ ವಿಧಿಸಿದೆ.
- ಜಿ.ಆರ್.ಶ್ರೀನಾಥ್, ವ್ಯಾಪಾರಿ
ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರ ಬಡವರ, ಸಾಮಾನ್ಯ ಜನರ ಹಿತ ಕಾಪಾಡುವ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಉತ್ತವಾಗಿದ್ದು ಶ್ರೀಸಾಮಾನ್ಯರ ಬದುಕು ಹಸನುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚು ತೆರಿಗೆ ವಿಧಿಸಿಲ್ಲ.
-ಎಂ.ಎಸ್.ಧರ್ಮವೀರ್, ಉದ್ಯಮಿ.
ಬಡವರಿಗೆ ಉಪವಾಸ. ಕಾರ್ಪೋರೇಟ್ ವಲಯಕ್ಕೆ ತುಪ್ಪ-ಅನ್ನ ಎಂಬಂತಾಗಿದೆ ಕೇಂದ್ರ ಸರ್ಕಾರದ ಬಜೆಟ್. ಸಾರ್ವಜನಿಕ ವಲಯದ ಷೇರುಗಳನ್ನು ಮಾರಾಟ ಮಾಡುವುದರ ಮೂಲಕ ಖಾಸಗಿಯವರಿಗೆ ಲಾಭ ಮಾಡಿಕೊಡಲು ಹೊರಟಿದ್ದಾರೆ ಚಿದಂಬರಂ.
- ಬಿ. ಉಮೇಶ್, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ
ದಿನಬಳಕೆ ವಸ್ತುಗಳ ಬೆಲೆಯೇರಿಕೆಗೆ ಕೇಂದ್ರ ಬಜೆಟ್ ಅಪಾರ ಕೊಡುಗೆ ನೀಡಿದೆ. ಜನಸಾಮಾನ್ಯರನ್ನು ಕಡೆಗಣಿಸಿ, ಶ್ರೀಮಂತರನ್ನು ಓಲೈಕೆ ಮಾಡಿದ್ದಾರೆ ಚಿದಂಬರಂ.
- ನಟರಾಜ್, ಸಮಾಜ ಸೇವಕ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.