ದೇವೇಗೌಡರ ಕುಟುಂಬ ಬಂದರೆ ತ್ಯಾಗಕ್ಕೆ ಸಿದ್ಧ
ತುಮಕೂರು: ದೇವೇಗೌಡರ ಕುಟುಂಬ ವರ್ಗದ ಯಾವುದೇ ಸದಸ್ಯರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳಾದಲ್ಲಿ, ತಾವು ಅವರ ಪರ ಪ್ರಚಾರ ಮಾಡಲು, ಕ್ಷೇತ್ರ ಬಿಟ್ಟುಕೊಡಲು, ಯಾವುದೇ ತ್ಯಾಗಕ್ಕೆ ಸಿದ್ಧವಿರುವುದಾಗಿ ಜೆಡಿಎಸ್ ಜಿಲ್ಲಾ ಮಾಜಿ ಅಧ್ಯಕ್ಷ ಎಚ್. ನಿಂಗಪ್ಪ ತಿಳಿಸಿದರು.
ಮಧುಗಿರಿ ಕ್ಷೇತ್ರದಂತೆ ತುಮಕೂರು ಗ್ರಾಮಾಂತರಕ್ಕೂ ಬಂದಲ್ಲಿ ತಮಗೆ ಅಪಾರ ಸಂತೋಷ ಎಂದರು.
ಅಷ್ಟೇ ಅಲ್ಲ, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ತಮಗಿಂತ ಯೋಗ್ಯ ಅಭ್ಯರ್ಥಿಗೆ ಟಿಕೆಟ್ ನೀಡುವುದಾದಲ್ಲಿ ತಮ್ಮ ತಕರಾರಿಲ್ಲ. ಟಿಕೆಟ್ಗಾಗಿ ಆರೋಗ್ಯಕರ ಪೈಪೋಟಿ ಇರಬೇಕೇ ಹೊರತು, ಕೀಳು ಮಟ್ಟದ ರಾಜಕಾರಣ ತರವಲ್ಲ ಎಂದರು. ಹಾಲಿ ಶಾಸಕ ಸುರೇಶ್ಗೌಡರಾಗಲಿ, ಆಪರೇಷನ್ ಕಮಲಕ್ಕೀಡಾಗಿ ಮತ್ತೆ ಜೆಡಿಎಸ್ಗೆ ಮರಳಿ, ಗೂಳೂರು ಸಮಾವೇಶ ತಡೆಗಟ್ಟಲು ಯತ್ನಿಸಿ ವಿಫಲವಾಗಿರುವ ಗೌರಿಶಂಕರ್ ಆಗಲಿ ತುಮಕೂರು ಗ್ರಾಮಾಂತರ ಕ್ಷೇತ್ರದವರಲ್ಲ. ತಾವೊಬ್ಬರೇ ಈ ಕ್ಷೇತ್ರದ ಮಣ್ಣಿನ ಮಗ. ಅವರಿಬ್ಬರೂ ಈ ಭಾಗದ ಮತದಾರರೇ ಅಲ್ಲ ಎಂದು ನಿಂಗಪ್ಪ ಲೇವಡಿ ಮಾಡಿದರು. ತಾವು ವ್ಯಾಪಾರಿ ಮನೋಭಾವದಿಂದ ರಾಜಕಾರಣ ಮಾಡುತ್ತಿಲ್ಲ. ಜನರಿಗಾಗಿ ರಾಜಕಾರಣ ಮಾಡುತ್ತಿದ್ದೇನೆ.
ತುಮಕೂರು ಗ್ರಾಮಾಂತರಕ್ಕೆ ಜೆಡಿಎಸ್ ವರಿಷ್ಠರು ಯೋಗ್ಯರಿಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸವಿದೆ. ತಾವು ನಿರಾಶರಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.