ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸೀಳು ಬಿಟ್ಟ ಶಾಲಾ ಕಾಂಪೌಂಡ್: ಗ್ರಾಮಸ್ಥರ ದೂರು

Parashurama
Updated On : 28 Feb 2013, 10:21 am

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಗಡಿ ಗ್ರಾಮವಾದ ಮಂಜುನಾಥಪುರದ ಪ್ರಾಥಮಿಕ ಶಾಲೆಗೆ ನಿರ್ಮಿಸಿದ್ದ ಕಾಂಪೌಂಡ್ ಗೋಡೆ ಸೀಳು ಬಿಟ್ಟಿದ್ದು, ಯಾವಾಗಬೇಕಾದರೂ ಮಕ್ಕಳ ಮೇಲೆ ಬಿದ್ದು ಅಪಾಯ ಸೃಷ್ಟಿಸಿರುವ ಸ್ಥಿತಿಯಲ್ಲಿ ಕಾಯ್ದು ಕುಳಿತಿದೆ ಎಂದು ಗ್ರಾಮಸ್ಥರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 ದಲಿತರು, ಹಿಂದುಳಿದವರೇ ಹೆಚ್ಚಾಗಿರುವ ಈ ಗ್ರಾಮಕ್ಕೆ ಸರ್ಕಾರ ಬಹಳ ವರ್ಷಗಳ ಹಿಂದೆಯೇ ಪ್ರಾಥಮಿಕ ಶಾಲೆಯನ್ನು ಮಂಜೂರು ಮಾಡಿ ಕಟ್ಟಡವನ್ನು ಕಟ್ಟಲಾಗಿತ್ತು. ಆದರೆ ಕಳೆದ 6 ತಿಂಗಳ ಹಿಂದೆಯಷ್ಟೇ ಸಾವಿರಾರು ರು. ವೆಚ್ಚದಲ್ಲಿ ಶಾಲಾ ಕಟ್ಟಡದ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದು, ಕಾಮಗಾರಿಯಂತೂ ತೀರಾ ಕಳಪೆಯಾಗಿದೆ. ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿದ್ದು ಕಾಮಗಾರಿ ಯಾವ ಮಟ್ಟಕ್ಕೆ ಎಕ್ಕುಟ್ಟಿ ಹೋಗಿದೆ ಎಂಬುದು ಎದ್ದು ಕಾಣುತ್ತಿದೆ. ಬಳಸಿರುವ ಸಿಮೆಂಟ್, ಮರಳು ತೀರಾ ಕಳಪೆಯಾಗಿದ್ದು, ಗೋಡೆ ಆರು ತಿಂಗಳಿಗೇ ಬೀಳುವಂತಾಗಲು ಪ್ರಮುಖ ಕಾರಣವಾಗಿದೆ. ಇದಕ್ಕೆ ಜವಾಬ್ದಾರರಾಗಿರುವ ಇಲಾಖೆಯ ಅಧಿಕಾರಗಳಲ್ಲದೆ ಎಂಜಿನಿಯರ್ ಮೇಲೆ ಶಿಸ್ತು ಕ್ರಮ ಜರುಗಿಸಿ,ಅವರಿಂದಲೇ ಹಣ ವಸೂಲಿ ಮಾಡಿ ಗುಣಮಟ್ಟದ ನೂತನ ಕಾಂಪೌಂಡ್ ನಿರ್ಮಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments