ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಿರುತೆರೆ ನಟ-ನಟಿಯರಿಗೆ ಕಲ್ಪತರು ನಾಡಿನಲ್ಲಿ ಸನ್ಮಾನ

Lingaraj Badiger
Updated On : 22 Jan 2013, 11:40 am

ತಿಪಟೂರು: ಕಿರುತೆರೆ ಧಾರಾವಾಹಿಗಳಿಂದ ಕಲಾವಿದರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವುದಲ್ಲದೆ ಉತ್ತಮ ಜೀವನಕ್ಕೆ ಸಹಕಾರಿಯಾಗಿದ್ದು ಅವರಿಗೆಲ್ಲ ಹೆಚ್ಚು ಅವಕಾಶಗಳು ಸಿಗುವಂತಾಗಲಿ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.
 ನಗರದ ರುದ್ರಮುನಿ ರೂರಲ್ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಸ್ನೇಹಕೂಟ ಬಳಗದ ವತಿಯಿಂದ ಆಕಾಶ ದೀಪ ಧಾರವಾಹಿಯು ನೂರು ಕಂತುಗಳು ಪೂರೈಸಿದ ಹಿನ್ನಲೆಯಲ್ಲಿ ಕಲಾವಿದರ ತಂಡಕ್ಕೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂದಿನ ಸಿನಿಮಾಗಳಲ್ಲಿ ಕಲಾವಿದರುಗಳಿಗೆ ಭವಿಷ್ಯ ಕಡಿಮೆಯಾಗುತ್ತಿದ್ದು, ಕಿರುತೆರೆ ಕಲಾವಿದರ ಭವಿಷ್ಯ ಶಾಶ್ವತವಾಗಿರುತ್ತದೆ. ಕಲಾವಿದರು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಉತ್ತಮ ಕಿರುತೆರೆ ಚಿತ್ರಗಳನ್ನು ತರಬೇಕಿದೆ ಎಂದರು. ನಂತರ ನೂರು ಕಂತುಗಳನ್ನು ಪೂರೈಸಿದ ಆಕಾಶ ದೀಪ ಧಾರಾವಾಯಿ ತಂಡವನ್ನು ಸನ್ಮಾನಿಸಿ ಅಭಿನಂದಿಸಿದರು.
 ನಿರ್ದೇಶಕ ಸಕ್ರೆಬೈಲು ಶ್ರೀನಿವಾಸ ಸನ್ಮಾನ ಸ್ವೀಕರಿಸಿ  ಮಾತನಾಡಿ ತಮ್ಮ ಧಾರಾವಾಹಿ ತಂಡಕ್ಕೆ ಅಭಿನಂದಿಸಿದ ತಿಪಟೂರಿನ ಸ್ನೇಹಕೂಟಕ್ಕೆ ಧನ್ಯವಾದ ಸಲ್ಲಿಸಿ ಆಕಾಶ ದೀಪ ಧಾರಾವಾಹಿ ಯಶಸ್ಸು ಕಲಾವಿದರಿಗೆ ಮತ್ತು ಪ್ರೋತ್ಸಾಹಿಸುತ್ತಿರುವ ಜನತೆಗೆ ಸಲ್ಲಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement