ತುರುವೇಕೆರೆ: ಕಬ್ಬಳ್ಳಿಗೆ ಪಾದಯಾತ್ರೆ
ತುರುವೇಕೆರೆ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಬ್ಬಳ್ಳಿಯ ಬಸವೇಶ್ವರ ಸ್ವಾಮಿಗೆ ಮಾಲೆ ಹಾಕಿರುವ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಕಬ್ಬಳ್ಳಿಗೆ ತೆರಳಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ತಾಲೂಕಿನ ಸಂಗಾಲಾಪುರ ಗ್ರಾಮದ ಉಣ್ಣೆ ಬಸವೇಶ್ವರ ದೇಗುಲ ಮುಂಭಾಗದಿಂದ ಮೆರವಣಿಗೆ ಹೊರಟ ಭಕ್ತಾದಿಗಳು ವಿವಿಧ ಧಾರ್ಮಿಕ ಕಲಾಕೃತಿಗಳೊಂದಿಗೆ ಮೆರವಣಿಗೆ ನಡೆಸಿದರು. ಬೆಡ್ತಂಗಡಿಯ ಚಿಲಿಪಿಲಿ ತಂಡದ ವಿವಿಧ ಕಲಾಕೃತಿಗಳು ಜನರ ಮನಸೂರೆಗೊಂಡವು. ತೇಜು (ಟೀ), ಸಂಗಲಾಪುರ ಶಂಕರಪ್ಪ ನವರ ನೇತೃತ್ವದಲ್ಲಿ ನೂರಾರು ಭಕ್ತಾದಿಗಳು ತಂಡ ತಂಡವಾಗಿ ಕಬ್ಬಳ್ಳಿಗೆ ತೆರಳಿದರು.