ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಂಎಸ್ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ

Mainashree
Updated On : 22 Jan 2013, 12:10 pm

ಹುಳಿಯಾರು: ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವವನ್ನು ವಿವೇಕಾನಂದ ತತ್ವ, ಆದರ್ಶ ಗುಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕ ಅಶ್ವತ್ಥನಾರಾಯಣ ಮಾತನಾಡಿ, ಜೀವನದಲ್ಲಿ ಉನ್ನತ ಆದರ್ಶವನ್ನು ಸ್ವೀಕರಿಸಿ, ಅವುಗಳ ಪಾಲನೆಗಾಗಿ  ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಜಗ್ಗದೆ ಮುನ್ನಡೆದಾಗ ಯಶಸ್ಸು ಲಭಿಸುತ್ತದೆ ಎಂಬುದಕ್ಕೆ ವಿವೇಕಾನಂದರೇ ಸಾಕ್ಷಿಯಾಗಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ವಿದೇಶಗಳಲ್ಲಿ ಹರಡಿದಂತಹ ಮೊದಲ ಮಾನವತಾವಾದಿ ಎಂದರೆ ವಿವೇಕಾನಂದರೇ ಆಗಿದ್ದಾರೆ ಎಂದರು.
ಆಂಗ್ಲ ಉಪನ್ಯಾಸಕ ಶ್ರೀನಿವಾಸಪ್ಪ ಮಾತನಾಡಿ ವಿವೇಕಾನಂದ ಆದರ್ಶ, ತತ್ವ, ಆಧ್ಯಾತ್ಮಿಕ ನಿಲವುಗಳ ಬಗ್ಗೆ ಅವರು ಹೊಂದಿದ್ದ ಶ್ರದ್ಧೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸೈಯ್ಯದ್ ಇಬ್ರಾಹಿಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಉಪನ್ಯಾಸಕ ಶಿವಯ್ಯ ಸ್ವಾಗತಿಸಿ, ಜಯಪ್ರಕಾಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement