ಹಿಂದುಳಿದ ವರ್ಗದವರಿಗೆ ಕೆಜೆಪಿ ಟಿಕೆಟ್ ನೀಡಿ
ತುರುವೇಕೆರೆ: ಮುಂಬರುವ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳೂ ಪ್ರಬಲ ಜಾತಿಗಳಿಗೇ ಆದ್ಯತೆ ನೀಡುತ್ತಿದ್ದು ಯಡಿಯೂರಪ್ಪನವರ ನೇತೃತ್ವದ ಕೆಜೆಪಿ ವತಿಯಿಂದ ಹಿಂದುಳಿದ ವರ್ಗದವರಿಗೇ ಟಿಕೇಟ್ ನೀಡಬೇಕು ಎಂದು ವಿಶ್ವ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಕೆಜಿಪಿಯ ಯುವ ಮುಖಂಡ ಎಂ.ಆರ್.ವಿನಯ್ ರಾಜಶೇಖರ್ (ಹೆಲಿಕ್ಯಾಫ್ಟರ್) ಆಗ್ರಹಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು ಯಡಿಯೂರಪ್ಪನವರು ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದಾರೆ. ಹಲವಾರು ಹಿಂದುಳಿದ ವರ್ಗಗಳ ಮಠ ಮಂದಿರಗಳ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ ಎಂದರು.
ತಾವೂ ಸ್ಪರ್ಧಾಕಾಂಕ್ಷಿ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಾವು ತಾಲೂಕಿನ ಜನತೆಯ ಸೇವೆ ಮಾಡುತ್ತಲೇ ಇದ್ದೇನೆ. ಗಾಣಿಗ ಸಮುದಾಯವನ್ನೂ ಸಹ ಪ್ರತಿನಿಧಿಸುತ್ತಿದ್ದೇನೆ. ವಿಶ್ವ ಗಾಣಿಗ ಸಮುದಾಯದ ರಾಜ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ತಾವು ಮುಂಬರುವ ಚುನಾವಣೆಯಲ್ಲಿ ಕೆಜಿಪಿ ಯಿಂದ ಸ್ಪರ್ಧೆ ಮಾಡಲು ಬಯಸಿರುವುದಾಗಿ ಎಂ.ಆರ್.ವಿನಯ್ ರಾಜಶೇಖರ್ ಹೇಳಿದರು.