ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ

Parashurama
Updated On : 25 Jan 2013, 10:18 am

ತುಮಕೂರು: ವಿದ್ಯೆ ಸಾಹಿತ್ಯ, ಕಲೆಯು ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿ ಎಂದು ಪತ್ರಿಕೋದ್ಯಮಿ ಎಸ್. ನಾಗಣ್ಣ ಅಭಿಪ್ರಾಯಪಟ್ಟರು.
ಅವರು ಇಲ್ಲಿನ  ಎಸ್.ಆರ್.ಎಸ್. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡದಿದ್ದಲ್ಲಿ, ಶಿಕ್ಷಣ ಕ್ಷೇತ್ರ ಬೆಳೆಸಲು ಕಷ್ಟವಾಗುತ್ತದೆ. ಲೇಪಾಕ್ಷ್ ಪರಿಶ್ರಮದಿಂದ ಶಿಕ್ಷಣ ಸಂಸ್ಥೆ ಈ ಮಟ್ಟಕ್ಕೆ ಬೆಳೆದು ಅಭಿವೃದ್ಧಿ ಪಥದತ್ತ ಸಾಗಿರುವುದು ಹಾಗು ಗುಣಮಟ್ಟ ಕಾಯ್ದು ಕೊಂಡಿರುವುದು ಸಂತೋಷದಾಯಕ ಎಂದರು.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಹು ಮುಖ್ಯವಾಗಿ ಅಮೆರಿಕ ರಾಷ್ಟ್ರಗಳಲ್ಲಿ ಶಿಕ್ಷಣಕ್ಕೆ ಎಲ್ಲಿಲ್ಲದ ಆದ್ಯತೆ. ಮಕ್ಕಳಿಗೆ ಆಸ್ಥಿ ಮಾಡಬೇಕೆಂಬ ಆಲೋಚನೆಯೆ ಕಡಿಮೆ. ರಾಷ್ಟ್ರದ ಎಲ್ಲ ಜನರು ಶಿಕ್ಷಿತರಾಗಬೇಕೆಂಬುದೆ ಅವರ ಧ್ಯೇಯವಾಗಿರುತ್ತದೆ. ಆದರೆ ನಮ್ಮ ರಾಷ್ಟ್ರಗಳಲ್ಲಿ ಆಸ್ಥಿ ಮೇಲಿನ ಒಲವು ಅಪಾರವಾಗಿರುತ್ತದೆ. ನಮ್ಮ  ಶಿಕ್ಷಣ ಶಿಕ್ಷೆಯಾಗಬಾರದು, ಶ್ರೀ ರಕ್ಷೆಯಾಗಬೇಕು. ಒಳಿತು-ಕೆಡುಕುಗಳನ್ನು ಅಧ್ಯಯನ ಮಾಡುವ ಶಕ್ತಿ ಶಿಕ್ಷಣಕ್ಕಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಡಿಡಿಪಿಐ ರತ್ನಯ್ಯ ಮಾತನಾಡಿ ಶಿಕ್ಷಣ ಸಂಸ್ಥೆಯನ್ನು ಈ ಮಟ್ಟಕ್ಕೆ ಬೆಳೆಸಿರುವ ಹಾಲ್ನೂರ್ ಲೇಪಾಕ್ಷರವರು ಶಿಕ್ಷಣ ಕತೃ. ಶಿಕ್ಷಣವನ್ನು  ಅಭಿವೃದ್ಧಿಪಡಿಸುವ ಏಕೈಕ ಗುರಿ ಹೊಂದಿ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ತಾವು ಒಬ್ಬ ನುರಿತ ಆಂಗ್ಲಭಾಷಾ ಉಪನ್ಯಾಸಕನಾಗಿರುವುದರಿಂದ ಶಿಕ್ಷಣ ಕ್ಷೇತ್ರದ ಆಗು-ಹೋಗುಗಳ ಪರಿವೆ ಅವರಿಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಬಿ.ಜಿ. ಕೃಷ್ಣಪ್ಪನವರು ಶಾಲೆಗೆ ಒಳ್ಳೆಯದಾಗಲೆಂದು ಹರಸಿ, ನಮ್ಮ ವಲಯದಲ್ಲಿ ಇದೊಂದು ಉತ್ತಮ ಶಿಕ್ಷಣ ಕ್ಷೇತ್ರವಾದದ್ದು ಸಂತೋಷದಾಯಕವೆಂದರು. ಅಧ್ಯಕ್ಷತೆಯನ್ನು ಸಂಸ್ಥಾಪಕ ಅಧ್ಯಕ್ಷ ಹಾಲ್ನೂರ್ ಲೇಪಾಕ್ಷ್ ವಹಿಸಿದ್ದರು. ಲೀಲಾಲೇಪಾಕ್ಷ್ ಪ್ರಾಸ್ತಾವಿಕ ನುಡಿಯನ್ನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments