ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಷಪೂರಿತ ಆಹಾರ ಸೇವನೆ: ಆಸ್ಪತ್ರೆಗೆ ಪ್ರಮುಖರ ಭೇಟಿ

Parashurama
Updated On : 25 Jan 2013, 10:03 am

ಪಾವಗಡ: ಸಮಾಜ ಕಲ್ಯಾಣ ಇಲಾಖೆಗೆ ವ್ಯಾಪ್ತಿಗೆ ಸೇರಿದ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಸುಮಾರು 76ಮಂದಿ ವಿದ್ಯಾರ್ಥಿಗಳು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಗುರುವಾರ ತಾಪಂ ಅಧ್ಯಕ್ಷೆ ರಾಧರಾಜ್‌ಗೋಪಾಲ್ ಉಪಾಧ್ಯಕ್ಷ ಗೋವಿಂದಪ್ಪ ಮಾಜಿ ಅಧ್ಯಕ್ಷೆ ಯಶೋಧಮ್ಮ, ಜೆಡಿಎಸ್ ಮುಖಂಡ ಕತಿಕ್ಯಾತನಹಳ್ಳಿ ಚಂದ್ರಶೇಖರ್ ಮುಂತಾದವರು ಹಾಸ್ಟಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಿಚಾರಿಸಿದ ಅಧ್ಯಕ್ಷೆ ರಾಧಮ್ಮ ಹಾಸ್ಟಲ್ ಸ್ವಚ್ಛತೆ, ಅಡಿಗೆ ಕೋಣೆ ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಿ ಅಡಿಗೆಯವರನ್ನು ಸ್ವಚ್ಛವಾಗಿರುವಂತೆ ಎಚ್ಚರಿಸಿದರು. ಸರ್ಕಾರದ ನಿಯಮನುಸಾರವಾಗಿ ವಸತಿ ಶಾಲೆ ಕಟ್ಟಡವಿಲ್ಲ. ಮಾಲೀಕರಿಂದ ಬಾಡಿಗೆ ಪಡೆದ ಕಟ್ಟಡದಲ್ಲಿ ವಸತಿ ಶಾಲೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಸೇರಿದಂತೆ  ವ್ಯವಸ್ಥಿತವಾದ ಕುಡಿಯುವ ನೀರು ಸುಸಜ್ಜಿತವಾದ ಕೊಠಡಿಗಳ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೆ ವಿದ್ಯಾರ್ಥಿಗಳು ಇಲ್ಲಿ ಅನೇಕ ಸಮಸ್ಯೆಗಳಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಆಹಾರದ ಗುಣಮಟ್ಟದ ಸೇರಿದಂತೆ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶಿಸ್ತು ಉತ್ತಮ ವಿದ್ಯಾಭ್ಯಾಸ ರೂಪಿಸುವಲ್ಲಿ ನಿಲಯಪಾಲಕ ಸೇರಿದಂತೆ ಎಲ್ಲರು ಆಸಕ್ತಿ ವಹಿಸುವಂತೆ ಸಲಹೆ ನೀಡಿದರು.  ಕಾಂಗ್ರೆಸ್ ಮುಖಂಡ ತಾಪಂ ಸದಸ್ಯ ಚನ್ನಮಲ್ಲಯ್ಯ, ತಾಪಂ ಸದಸ್ಯರಾದ ರಾಮಣ್ಣ, ಗುಂಡ್ಲಹಳ್ಳಿ ರಾಮಾಂಜಿನಪ್ಪ, ಸರವಾಟಪುರ ಮಂಜುನಾಥ್, ರಾಮಾಂಜಿನರೆಡ್ಡಿ, ನಾಗವೀಣಾ ಗೋವರ್ಧನ, ಪಾರ್ವತಮ್ಮ ಹನುಮಂತರಾಯಪ್ಪ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments