ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆಯುಕ್ತ ಡಾ.ವೆಂಕಟೇಶಯ್ಯಗೆ ಬೀಳ್ಕೊಡುಗೆ

Parashurama
Updated On : 28 Jan 2013, 12:09 pm

ತಿಪಟೂರು: ಅಧಿಕಾರಿಗಳು, ರಾಜಕಾರಣಿಗಳು ಕೈ ಜೋಡಿಸಿದರೆ ಯಾವುದೇ ನಗರವನ್ನು ಉತ್ತಮ ನಗರಸಭೆಯನ್ನಾಗಿ ಮಾಡುವ ಅವಕಾಶವಿರುತ್ತದೆ ಎಂದು ನಗರಸಭೆ ಆಯುಕ್ತ ಡಾ.ವೆಂಕಟೇಶಯ್ಯ ಅಭಿಪ್ರಾಯಪಟ್ಟರು.
ಸುಮಾರು ಮೂರುವರೆ ವರ್ಷಗಳ ಕಾಲ ತಿಪಟೂರು ನಗರಸಭೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ಬಡ್ತಿಹೊಂದಿ ಬೆಂಗಳೂರಿಗೆ ವರ್ಗವಾಗಿ ಹೋಗುತ್ತಿರುವ ಡಾ.ವೆಂಕಟೇಶಯ್ಯನವರಿಗೆ ತಿಪಟೂರು ತಹಸೀಲ್ದಾರ್ ವಿಜಯಕುಮಾರ್ ಅವರ ಅಧಿಕೃತ ನಿವಾಸದಲ್ಲಿ ನಗರದ ಬಯಲು ಸೀಮೆ ಸಾಂಸ್ಕೃತಿಕ ಸಂಘದ ವತಿಯಿಂದ ಸರಳ ಬೀಳ್ಕೊಡೆಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆಯುಕ್ತರು, ತಿಪಟೂರಿನ ನಾಗರಿಕರು ಸರಳ ಸಜ್ಜನಿಕೆ ಉಳ್ಳವರು. ದಕ್ಷಿಣ ಕರಾವಳಿಯ ಜನತೆಯ ಮನೋಭಾವ ಹೊಂದಿದವರಾಗಿದ್ದು ಭಾವನೆಗಳಿಗೆ ಒತ್ತು ನೀಡುವ ಸ್ವಭಾವದವರಾಗಿದ್ದಾರೆ. ಇಂತಹ ಜನತೆಯಿಂದ ಅಧಿಕಾರಿಗಳು ಕಲಿಯಬೇಕಾದ್ದು ಸಾಕಷ್ಟಿದೆ ಎಂದ ಆಯುಕ್ತರು ರಾಜಕೀಯ ಸಮಸ್ಯೆಯಿಲ್ಲದಿದ್ದರೆ  ಇನ್ನೂ ಮಾದರಿ ನಗರವನ್ನಾಗಿ ಮಾರ್ಪಡಿಸಬಹುದಿತ್ತು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments