ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅರ್ಜಿ ಸಲ್ಲಿಸಿದ ವರ್ಷದಲ್ಲಿಯೇ ಮಾಸಾಶನ ಜಾರಿಗೊಳಿಸಿ

Parashurama
Updated On : 29 Jan 2013, 12:14 pm

ತುಮಕೂರು: ಮಾಸಾಶನ ಪಡೆಯುವ ಬಡ ಕಲಾವಿದನ ವಯೋವುತಿಯನ್ನು 50 ಕ್ಕೆ ಇಳಿಸುವ ಜೊತೆಯಲ್ಲಿ ಅರ್ಜಿ ಸಲ್ಲಿಸಿದ ವರ್ಷದಲ್ಲಿಯೇ ಮಾಸಾಶನ ಜಾರಿಗೊಳಿಸಬೇಕೆಂದು ಜಾನಪದ ಸಂಗೀತ ಮತ್ತು ಯಕ್ಷಗಾನ ಬಯಲಾಟ ಕಲಾವಿದರ ಸಂಘದ ರಾಜ್ಯಾಧಕ್ಷ ಕಂಟಲಗೆರೆ ಸಣ್ಣಹೊನ್ನಯ್ಯ ಒತ್ತಾಯಿಸಿದರು.
ಗುಬ್ಬಿ ತಾಲೂಕಿನ ಮುಸಕೊಂಡ್ಲಿ ಗ್ರಾಮದಲ್ಲಿ ಶ್ರೀ ದುರ್ಗಾಂಬ ಶನೇಶ್ವರ ಕಲಾವೃಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರದಲ್ಲಿ ಬಯಲಾಟ ಭಾಗವತ ದಿ.ನರಸಪ್ಪ ಅವರ ಸ್ಮರಣಾರ್ಥ ನಡೆದ ಜಾನಪದ ಕಲಾಮೇಳದಲ್ಲಿ ಮಾತನಾಡಿದ ಅವರು ಸಂಘಟನೆಯ ಕೊರತೆ ಎದುರಿಸುತ್ತಿರುವ ಜಾನಪದ ಕಲಾವಿದರು ಒಂದಡೆ ಸೇರಿ ಸಂಘಟನಾ ಶಕ್ತಿ ಪ್ರದರ್ಶಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದು ಸೂಕ್ತ ಎಂದರು.
ಮನರಂಜನೆ ನೀಡುವ ಜಾನಪದ ಕಲಾವಿದರ ಜೀವನ ದುಸ್ತರವಾಗಿದೆ. ಆಧುನಿಕತೆಯ ಅಬ್ಬರದಲ್ಲಿ ಕುಟುಂಬ ನಡೆಸಲು ಅಗದ ದುಃಸ್ಥಿತಿ ತಲುಪಿ ನಿರುದ್ಯೋಗಿಗಳಾಗಿ ಬೀದಿ ಪಾಲಾಗಿರುವ ನಿದರ್ಶನಗಳು ಕಣ್ಮುಂದಿದೆ. ಆದರೂ ಜನಪದ ಸಂಸ್ಕೃತಿ ಉಳಿಸುವಲ್ಲಿ ಜೀವವನ್ನು ತೇದಿದ್ದಾರೆ. ಜೀವನ ಪರ್ಯಂತ ಪರದಾಡುವ ಕಲಾವಿದನ ಮಾಸಾಶನವನ್ನು ರಾಜ್ಯ ಸರ್ಕಾರ ಕೇವಲ 1 ಸಾವಿರ ರು.ಗಳಿಗೆ ಸೀಮಿತ ಮಾಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ನೀಡುವ 2 ಸಾವಿರ ರು.ಗಳಷ್ಟೇ ರಾಜ್ಯ ಸಹ ಮಾಸಾಶನ ನೀಡಬೇಕು ಎಂದು ಆಗ್ರಸಿದ ಅವರು ಮಾಸಶನಕ್ಕೆ ಅರ್ಜಿ ಸಲ್ಲಿಸಿ ಕಚೇರಿಗೆ ಅಲೆಯುವ ಕಲಾವಿದರ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದರು.
ಬೆಳೆಸಬೇಕು: ಜಾನಪದ ಸಂಗೀತ ಮತ್ತು ಯಕ್ಷಗಾನ ಬಯಲಾಟ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಕಾಡಶೆಟ್ಟಿ ಸತೀಶ್ ಮಾತನಾಡಿ ಜಾಗತೀಕರಣ ತಾಪದಲ್ಲಿ ಸಮಾಜದಿಂದ ಮರೆಯಾಗುತ್ತಿರುವ ಜಾನಪದ ಪರಂಪರೆಯನ್ನು ಬೆಳೆಸಬೇಕು. ಕಲಾವಿದರಲ್ಲಿ ಆಸಕ್ತಿ ಮೂಡಿಸಿ ಮುಂದಿನ ಪೀಳಿಗೆಗೆ ಜಾನಪದ ಕಲೆ ಉಳಿಸುವಲ್ಲಿ ವೃತ್ತಿ ಪರತೆ ರೂಢಿಸುವ ಆಲೋಚನೆ ಸರ್ಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಲಾವಿದರ ಒಗ್ಗೂಡಿಸುವ ಪ್ರಯತ್ನ ಫೆ. 17 ರಂದು ತುಮಕೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಜಾನಪದ ಕಲಾವಿದರ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಈ ಕಲಾಮೇಳದಲ್ಲಿ ಸೋಮನಕುಣಿತ, ಸೋಬಾನೆ ಪದ, ಭಜನೆ, ಹರೇವಾದ್ಯ, ಚಿಟ್ಟಿಮೇಳ ಸೇರಿದಂತೆ ವಿವಿಧ ಪ್ರಾಕಾರಗಳ ಕಲಾವಿದರು ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಿದರು.
ಈ ಕಲಾಮೇಳದಲ್ಲಿ ಗ್ರಾಪಂ ಅಧ್ಯಕ್ಷ ಟಿ. ನಟರಾಜು, ತಾಪಂ ಸದಸ್ಯೆ ಶಿವರತ್ನ, ಮಾಜಿ ಪ್ರಧಾನ ಎಂ.ಎನ್. ಕರಿಯಪ್ಪ, ಜಾನಪದ ಸಂಗೀತ ಮತ್ತು ಯಕ್ಷಗಾನ ಬಯಲಾಟ ಕಲಾವಿದರ ಸಂಘದ ಜಿಲ್ಲಾ ಖಜಾಂಚಿ ಕೆ.ಎಸ್. ರಾಘವೇಂದ್ರ, ವಿಎಸ್‌ಎಸ್‌ಎನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಂ. ಉಮೇಶ್, ಪೊಲೀಸ್ ಇಲಾಖೆಯ ಎಂ.ಎನ್. ರೇವಣ್ಣ, ಶ್ರೀ ದುರ್ಗಾಂಬ ಶನೇಶ್ವರ ಕಲಾವೃಂದದ ವ್ಯವಸ್ಧಾಪಕಾರದ ಎಂ.ಎನ್. ಮೂರ್ತಿ, ಎಂ.ಸಿ. ಕೆಂಚರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments