ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲಿ: ಸಿಬಿಎಸ್

Rashmi Kasaragodu
Updated On : 29 Jan 2013, 11:42 am




ಹುಳಿಯಾರು: ಶಾಲೆ ವಿಚಾರದಲ್ಲಿ ಮಗುವಿನ ಚಟುವಟಿಕೆ, ಆಸಕ್ತಿಗಳ ಬಗ್ಗೆ ಪೋಷಕರು ಗಮನಹರಿಸಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರನ್ನು ಬೆಳೆಸುವ ಮೂಲಕ ಮಕ್ಕಳ ಉತ್ತಮ ಬೆಳವಣಿಗೆಯ ಮೇಲೆ ಹೆಚ್ಚಿನ ಆಸಕ್ತಿತಂದೆ ತಾಯಂದಿರು ಹೊಂದಿರಬೇಕೆಂದು ಶಾಸಕ ಸಿ.ಬಿ. ಸುರೇಶ್ ಬಾಬು ಹೇಳಿದರು.
ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಎಂ.ಶಿವಲಿಂಗಯ್ಯ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಶಾಲೆಗಳಿಗೆ ಹೆಚ್ಚಿನ ಅನುದಾಗಳು ಪೂರೈಕೆಯಾಗುತ್ತಿದ್ದು ಅವುಗಳನ್ನು ಶಾಲಾ ಶಿಕ್ಷಕರು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸಿ ಎಂದರು. ಅಲ್ಲದೆ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ  ಡಿಸ್ಟಿಂಗ್‌ಶನ್ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕವನ್ನು ತಾಲೂಕು ಮಟ್ಟದಲ್ಲಿ ನೀಡುತ್ತಿದ್ದು, ತಾವು ಸಹ ಉತ್ತಮ ಅಂಕಪಡೆಯಬೇಕೆಂಬ ಛಲವನ್ನು ಹೊಂದಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಎಂದರು.
ಶಾಲೆಯನ್ನು ನಿರ್ಮಿಸಲು ಜಾಗವನ್ನು ದಾನ ಮಾಡಿದ ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಅವರ ತಂದೆ ದಿವಂಗತ ಕೆ.ಎಂ. ಶಿವಲಿಂಗಯ್ಯ ಅವರಿಗೆ ಅಭಿನಂದನೆಯನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ಶಾಲೆಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುವ ಭರವಸೆ ನೀಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ಪ್ರಾಸ್ತಾವಿಕ ನುಡಿ ನುಡಿದರು. ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ, ಗ್ರಾ.ಪಂ.ಸದಸ್ಯ ಧನಂಜಯ್, ಎಸ್.ಡಿ.ಎಂಸಿ ಮಾಜಿ ಅಧ್ಯಕ್ಷ ಜಲಾಲ್ ಸಾಬ್, ಗುತ್ತಿಗೆದಾರ ನಂದಿಹಳ್ಳಿಶಿವಣ್ಣ, ಮುಖ್ಯಶಿಕ್ಷಕಿ ತ್ರಿವೇಣಿ ಹಾಗೂ ಶಾಲಾ ಶಿಕ್ಷಕರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement