ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು

Rashmi Kasaragodu
Updated On : 29 Jan 2013, 11:40 am




ಕೊರಟಗೆರೆ: ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಬಡ ಮಕ್ಕಳು ಎದುರು ನೋಡುತ್ತಿರುವ ಕನಸಿನ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ತಿಳಿಸಿದರು.
ಅವರು ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಪ್ರೌಢಾಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುಖ್ಯಶಿಕ್ಷಕರು ಶಾಲೆಯನ್ನು ತನ್ನ ಕುಟುಂಬದಂತೆ ನೊಡಿಕೊಳ್ಳಬೇಕು ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರು ವಿಸ್ವಾಸದಿಂದ ಕಾರ್ಯನಿರ್ವಹಿಸಿ ಶಾಲೆ ಮುಗಿದ ನಂತರ ಉತ್ತಮ ಶೈಕ್ಷಣಿಕ ಚರ್ಚೆ ಮಾಡಿದಲ್ಲಿ ಅಲ್ಲಿನ ವಾತಾವರಣ ಉತ್ತಮಗೊಂಡು ಮಕ್ಕಳಿಗೆ ಒಳ್ಳೆಯ ಪರಿಸರದಲ್ಲಿ ಕಲಿಕೆ ದೊರೆಯಲಿದೆ ಎಂದರು.
ಏಕರೂಪ ಶಿಕ್ಷಣ ಜಾರಿಗೆ ಬರುತ್ತಿರುವುದರಿಂದ ಶಿಕ್ಷಣ ಇಲಾಖೆ ಮಾನವ ಸಂಪನ್ಮೂಲ ಇಲಾಖೆಯಾಗಿದ್ದು ಶಿಕ್ಷಣದೊಂದಿಗೆ ಮಕ್ಕಳಿಗೆ ಸಮಾಜಮುಖಿ ಕರ್ತವ್ಯ ಮತ್ತು ಸೇವೆಯನ್ನು ಬೋಧಿಸಬೇಕಿದ್ದು ಪೋಷಕರ ಕಾಳಜಿಯೂ ಮಕ್ಕಳ ಕಲಿಕೆಗೆ ಅತ್ಯವಶ್ಯಕ ಎಂದರು.
ಹರಿಯುವ ನೀರು: ಮಧುಗಿರಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಅಂಜಿನಪ್ಪ ಮಾತನಾಡಿ ಶಿಕ್ಷಣ ಇಲಾಖೆ ಹರಿಯುವ ನೀರಾಗಿದ್ದು ಸೇವಾ ಮನೂಭಾವ ಮುಖ್ಯ ಉದ್ದೇಶದೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕಿದೆ. ಇತ್ತಿಚಿನ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಉತ್ತಮ ಫಲಿತಾಂಶಕ್ಕಾಗಿ ಚಿಂತನ ಮಂತನ, ಶೈಕ್ಷಣಿಕ ಯೋಜನೆ, ವಿಶೇಷ ಬೋಧನೆ, ಚಟುವಟಿಕೆ ಮುಂತಾದವು ಈ ಜಿಲ್ಲೆಯಲ್ಲಿ ಚೆನ್ನಾಗಿ ನಡೆದುದ್ದರ ಪ್ರಯುಕ್ತ ಮಧುಗಿರಿ ಶೈಕ್ಷಣಿಕ ಜಿಲ್ಲೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ತಾಲೂಕುಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಮೂರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.  ನಂದಿನಿ ವೈ.ಎ.ನಾರಾಯಣಸ್ವಾಮಿ, ನಿವೃತ್ತ ಡಿಡಿಪಿಐ ಹುಚ್ಚಯ್ಯ, ಪ್ರಾಂಶುಪಾಲ ಈಶ್ವರಯ್ಯ, ಆದಿಶೇಷ ಮೂರ್ತಿ, ರಾಜ್ಯ ಸಂಘದ ಚಂದ್ರೇಗೌಡ, ಜಿಲ್ಲಾ ಸಂಘದ ಆಧ್ಯಕ್ಷ ಮೆಹಬೂಬ್ ಪಾಷ, ಬಿಇಓಗಳಾದ ಮಹೇಶ್, ಮಂಜುನಾಥ್,  ನಾಗರಾಜು, ರಾಜಕುಮಾರ್, ರಾಮಕೃಷ್ಣಯ್ಯ, ತಾಲೂಕು ನೌಕರರ ಸಂಘದ ಅಧ್ಯಕ್ಷ ವೀರಕ್ಯಾತರಾಯ, ಕಾರ್ಯದರ್ಶಿ, ವಿಜಯನರಸಿಂಹ, ಶಿಕ್ಷಕರ ಸಂಘದ ರಮೇಶ್, ಎಲ್. ಕಾಮಯ್ಯ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement