ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವೈದ್ಯರ ನಿರ್ಲಕ್ಷ್ಯ: ತಾಯಿ, ಮಗು ಸಾವು- ಉದ್ರಿಕ್ತರಿಂದ ಗಾಜು ಪುಡಿಪುಡಿ

Rashmi Kasaragodu
Updated On : 29 Jan 2013, 11:40 am




ತುಮಕೂರು: ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮಗು ಸಾವನ್ನಪ್ಪಿರುವ ಘಟನೆ ಸೇವಾ ಆಸ್ಪತ್ರೆಯಲ್ಲಿ ನಡೆದಿದೆ. ತಬುಸಮ್ ತಾಜ್(21) ಎಂಬಾಕೆ ಹೆರಿಗೆಗೆ ಬನಶಂಕರಿಯಲ್ಲಿರುವ ಸೇವಾ ಆಸ್ಪತ್ರೆಗೆ ದಾಖಲಾದಳು.
ಆದರೆ ಆಸ್ಪತ್ರೆ ವೈದ್ಯರು ಸರಿಯಾಗ ತಯಾರಿ ನಡೆಸದೆ ಹೆರಿಗೆ ಮಾಡಿಸಲು ಮುಂದಾದರು. ಈ ಸಂದರ್ಭ ರಕ್ತಸ್ರಾವ ಆಗಿ ಆಕೆ ಮೃತಪಟ್ಟಿದ್ದಾಳೆ. ಇನ್ನು ಮಗುವಿನ ಹೊಕ್ಕುಳ ಬಳ್ಳಿ ಸುತ್ತಾಕಿಕೊಂಡಿದ್ದರಿಂದ ಮಗು ಕೂಡ ಸಾವನ್ನಪ್ಪಿದೆ. ತಾಯಿ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತರ ಸಂಬಂಧಿಗಳು, ಸಾರ್ವಜನಿಕರು ಆಸ್ಪತ್ರೆ ಮುಂದೆ ಜಮಾಯಿಸಿದರು. ಜನರ ಆಕ್ರೋಶಕ್ಕೆ ಸೇವಾ ಆಸ್ಪತ್ರೆಯ ಕಿಟಕಿ, ಬಾಗಿಲು, ನಾಮಫಲಕ ಪುಡಿಪುಡಿಯಾಯ್ತು. ಆಸ್ಪತ್ರೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಬೀಸಿದರು.  ಇದರಿಂದ ಮತ್ತಷ್ಟು ಕೆರಳಿದ ಜನರು ದಿಢೀರ್ ರಸ್ತೆ ತಡೆ ನಡೆಸಿ ಸೇವಾ ಅಸ್ಪತ್ರೆ ವೈದ್ಯರ ವಿರುದ್ಧ ಧಿಕ್ಕಾರ ಕೂಗಿದರು. ಆಸ್ಪತ್ರೆಯಲ್ಲಿ ಸಾವಿನ ಪ್ರಕರಣ ಹೆಚ್ಚಾಗ್ತಾ ಇವೆ. ಕ್ರಮ ಕೈಗೊಳ್ಳಿ. ಆತನ ಪದವಿ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್, ಪೊಲೀಸರು ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಿ ಆಸ್ಪತ್ರೆಗೆ ಬೀಗ ಜಡಿದರು. ಇದೇ ಸಂದರ್ಭದಲ್ಲಿ ಇಬ್ಬರು ವೈದ್ಯರನ್ನು ಬಂಧಿಸಲಾಯಿತು. ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement