ಕೋರ್ಟ್ಗೂ ತಟ್ಟಿತು ಕರೆಂಟ್ ಪಾಬ್ಲಂ
ತುಮಕೂರು: ತುಮಕೂರಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯ ಬಿಸಿ ನ್ಯಾಯಾಲಯಕ್ಕೂ ತಟ್ಟಿದ್ದು ಇದರ ಪರಿಣಾಮ ತೀರ್ಪನ್ನು ಮುಂದಕ್ಕೆ ಹಾಕಿದ ಘಟನೆ ನಡೆದಿದೆ.
ಇಲ್ಲಿನ ಒಂದನೇ ತ್ವರಿತ ವಿಲೇವಾರಿ ನ್ಯಾಯಾಲಯದಲ್ಲಿ ನಗರಸಭೆ ಸದಸ್ಯನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಮಂಗಳವಾರ ಹೊರಬೀಳಬೇಕಾಗಿತ್ತು. ಆದರೆ ಬೆಳಗ್ಗೆಯಿಂದಲೂ ಬಿಟ್ಟು ಬಿಡದೆ ಕರೆಂಟ್ನ ಕಣ್ಣಾಮುಚ್ಚಾಲೆಯಿಂದ ತೀರ್ಪನ್ನು ಫೆಬ್ರವರಿ 1 ಕ್ಕೆ ಪ್ರಕಟಿಸಲು ನಿರ್ಧರಿಸಲಾಯಿತು.
ಮಂಗಳವಾರ ಬೆಳಗ್ಗೆಯಿಂದಲೇ ಕರೆಂಟ್ ಸಮಸ್ಯೆ ಉದ್ಭವವಾಗಿತ್ತು. ಆಗ ಬರುತ್ತೆ, ಈಗ ಬರುತ್ತೆ ಅಂತಾ ಮಧ್ಯಾಹ್ನದ ತನಕ ಕಾಯಲಾಯಿತು. ಕತ್ತಲಲ್ಲೇ ಕೋರ್ಟ್ ಕಲಾಪಗಳನ್ನು ಮುಂದುವರೆಸಲಾಯಿತು. ಬೆಳಗ್ಗೆಯಿಂದ ಕರೆಂಟ್ ಕೈ ಕೊಟ್ಟಿದ್ದರಿಂದ ಯುಪಿಎಸ್ ಕೂಡ ಕಾರ್ಯನಿರ್ವಹಿಸದಂತೆ ಆಯಿತು. ನಗರಸಭೆ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರ ಬೀಳುವ ಹಿನ್ನೆಲೆಯಲ್ಲಿ ಜನ ಕೂಡ ಜಮಾಯಿಸಿದ್ದರು. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ತೀರ್ಪು ಮುಂದಕ್ಕೆ ಹೋಯಿತು ಎನ್ನುತ್ತಾರೆ ವಕೀಲರು. ನಗರಸಭೆ ಸದಸ್ಯನ ಕೊಲೆ ಪ್ರಕರಣದಲ್ಲಿ 16 ಮಂದಿ ಆರೋಪಿಗಳ ಇದ್ದಾರೆ. ತೀರ್ಪು ಹೊರ ಬಿದ್ದ ಕೂಡಲೇ ಅದರ ಪ್ರತಿಯನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕಾಗುತ್ತದೆ. ಆದರೆ ಸಂಜೆ ತನಕ ವಿದ್ಯುತ್ ಬಾರದೇ ಇದ್ದುದ್ದರಿಂದ ತೀರ್ಪನ್ನು ಮುಂದಕ್ಕೆ ಹಾಕಲಾಯಿತು ಎನ್ನಲಾಗಿದೆ.
ಬೆಸ್ಕಾಂಗೆ ಫೋನ್: ವಿದ್ಯುತ್ ಬಾರದೇ ಹಿನ್ನೆಲೆಯಲ್ಲಿ ನ್ಯಾಯಾಲಯದ ಆಡಳಿತ ಮಂಡಳಿಯವರು ಹಲವಾರು ಬಾರಿ ಬೆಸ್ಕಾಂಗೆ ಫೋನ್ ಮಾಡಿದ್ದರು ವಿದ್ಯುತ್ ಮಾತ್ರ ಬರಲೇ ಇಲ್ಲ. ಸಂಜೆ 4.30 ಕ್ಕೆ ವಿದ್ಯುತ್ ಬರುವಷ್ಟರಲ್ಲಿ ತೀರ್ಪು ಮುಂದಕ್ಕೆ ಹಾಕಲಾಗಿತ್ತು.
ಆರೋಪಿ ಪರ ವಕೀಲ ಎಚ್.ಬಿ. ಮಲ್ಲಿಕಾರ್ಜುನ್ ಕನ್ನಡಪ್ರಭ ದೊಂದಿಗೆ ಮಾತನಾಡಿ ಕರೆಂಟ್ಗಾಗಿ ಬೆಳಗ್ಗೆಯಿಂದ ಕಾದೆವು. ಆದರೆ ಬರಲಿಲ್ಲ. ಹೀಗಾಗಿ ತೀರ್ಪು ಮುಂದಕ್ಕೆ ಹೋಯಿತು ಎಂದು ಸ್ಪಷ್ಟಪಡಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.