ಗ್ರಾಮೀಣ ಕ್ರೀಡೆ ಉತ್ತೇಜಿಸುವುದು ಅಗತ್ಯ: ಜ್ಯೋತಿ ಗಣೇಶ್ ಅಭಿಮತ
ತುಮಕೂರು: ಆಧುನಿಕ ಆಹಾರ ಪದ್ಧತಿಯಿಂದ ಮಧುಮೇಹ, ರಕ್ತದೊತ್ತಡ, ಹೃದಯಬೇನೆಯಂತಹ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂತಹ ಕಾಯಿಲೆಗಳನ್ನು ನಿಯಂತ್ರಿಸಿಕೊಳ್ಳಲು ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಬೇಕಾಗಿದೆ ಎಂದು ಕೆಜೆಪಿ ಮುಂಖಡ ಜ್ಯೋತಿ ಗಣೇಶ್ ತಿಳಿಸಿದರು.
ಅವರು ತುಮಕೂರಿನ 6 ನೇವಾರ್ಡ್ ಭೀಮಸಂದ್ರದಲ್ಲಿ ವಂದೇಮಾತರಂ ಯೂತ್ ಕ್ಲಬ್ನ ಉದ್ಘಾಟನಾ ಸಮಾರಂಭ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಗಳ ಸ್ಮರಣಾರ್ಥ ಅಂತರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಬಿ.ಜಿ.ಎಸ್. ಕಪ್ ಕಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಂದೇಮಾತರಂ ಯೂತ್ ಕ್ಲಬ್ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಚ್. ಕೃಷ್ಣಪ್ಪ ಮಾತನಾಡಿ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಬಲಗೊಳ್ಳುತ್ತಾರೆ. ಜೀವನದ ಸುಖ, ದುಃಖಗಳನ್ನು ಅತ್ಮವಿಶ್ವಾಸದಿಂದ ಎದರಿಸಲು ಕ್ರೀಡೆ ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ಹಿಸಿದ್ದ 6ನೇ ವಾರ್ಡ್ ನಗರಸಭಾ ಸದಸ್ಯ ಮಂಜುನಾಥ್ ಮಾತನಾಡಿ, ನನ್ನ ವಾರ್ಡಿನ ರಸ್ತೆ, ನೀರು, ಚರಂಡಿ, ಬೆಳಕಿನ ವ್ಯವಸ್ಥೆಯ ಅಭಿವೃದ್ಧಿಗೆ ಸಂಪೂರ್ಣ ಶ್ರಮವಹಿಸಿದ್ದು, ಯೂತ್ ಕ್ಲಬ್ ಸದಸ್ಯರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋರಿ ಮಂಜುನಾಥ್, ನಟರಾಜು, ದೊಡ್ಡಸಿದ್ದಯ್ಯ, ಗೋವಿಂದೇಗೌಡ, ಧನಂಜಯ್, ಶಂಕರ್, ಹನುಮಂತರಾಜು, ರವಿಗೌಡ, ಮಕ್ಬಲ್ ಪಾಷ, ಮೊಹಮದ್ ಗೌಸ್ ಫೀರ್, ಮೊಹಿದ್ದೀನ್ ಫೀರ್, ಎಸ್.ಎಸ್. ಮಾಗಡಿ ವೇದಿಕೆಯಲ್ಲಿದ್ದರು.
ದಯಾನಂದ್ ಪ್ರಾರ್ಥಿಸಿ, ವಂದೇಮಾತರಂ ಯೂತ್ ಕ್ಲಬ್ನ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಬಿ.ಎನ್. ಅವರು ಸ್ವಾಗತಿಸಿ, ಕಾರ್ಯದರ್ಶಿ ಶಂಭುಲಿಂಗಸ್ವಾಮಿ.ಬಿ.ಎನ್ ಅವರು ವಂದಿಸಿ, ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.