ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಜಕೀಯ ವ್ಯವಸ್ಥೆ ಕೆಡಿಸಿದ ಬಿಜೆಪಿ ಸರ್ಕಾರ: ಶಾಸಕ ಶಿವಶಂಕರರೆಡ್ಡಿ

Parashurama
Updated On : 29 Jan 2013, 11:22 am

ಮಧುಗಿರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜಕೀಯ ವ್ಯವಸ್ಥೆ ಕೆಡಿಸಿ ದುರಾಡಳಿತ, ಭ್ರಷ್ಟಾಚಾರದಲ್ಲಿ ಮುಳುಗಿದ್ದೆ ದೊಡ್ಡ ಸಾಧನೆ ಎಂದು ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ  ನುಡಿದರು.
ಭಾನುವಾರ ಇಲ್ಲಿನ ಎಂಎನ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ  ಮಧುಗಿರಿ ತಾಲೂಕು ರೆಡ್ಡಿ ಸಮುದಾಯದ ಕಾಂಗ್ರೆಸ್ ಮುಖಂಡರ  ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜಕಾರಣದಲ್ಲಿ ಜನರಿಗೆ ಅಗತ್ಯವಾದ ಶಾಶ್ವತ ಕೆಲಸ ಮಾಡುವ ಸಂಕಲ್ಪ ತೊಡಬೇಕೆ ಹೊರೆತು  ಅಲ್ಪ ಸಂತೋಷಕ್ಕೆ  ರಾಜಕಾರಣ ಮಾಡಬಾರದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೂ ಮುಕ್ಕಾಲು ವರ್ಷದಲ್ಲಿ  ಅಭಿವೃದ್ಧಿ ಕೆಲಸ ಕೈಗೊಳ್ಳದೇ ಕೈಚಲ್ಲಿದ ಪರಿಣಾಮ ರಾಜ್ಯದ ಜನ ಬೇಸತ್ತು  ಕಾಂಗ್ರೆಸ್ ಬಗ್ಗೆ ಒಲವು ತೋರಿದ್ದು  ಮುಂಬರುವ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದರು.
ಸ್ವಾಭಿಮಾನದ ಬದುಕು: ರೆಡ್ಡಿ ಜನಾಂಗ ಕೃಷಿ ಚಟುವಟಿಕೆಯಲ್ಲಿ ತೊಡಗಿ ಕಷ್ಟಪಟ್ಟು ಪ್ರಮಾಣಿಕವಾಗಿ ದುಡಿದು ಸ್ವಾಭಿಮಾನದ ಬದುಕು ಸಾಗಿಸುವ ಜನಾಂಗವಲ್ಲದೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ವಿಶೇಷ ಗುಣ ಹೊಂದಿದ್ದು ರಾಜಕೀಯ ಪ್ರಭಾವ ಹೊಂದಿರುವ ಸಮುದಾಯ. ಆದ ಕಾರಣ ಮಧುಗಿರಿ ಕ್ಷೇತ್ರಕ್ಕೆ ಕೆ.ಎನ್. ರಾಜಣ್ಣ ಕಾಂಗ್ರೆಸ್ ಅಭ್ಯರ್ಥಿ ಖಚಿತ. ರಾಜಣ್ಣ ನೇರ, ನಿಷ್ಠುರ ಮನೋಭಾವವುಳ್ಳ ವ್ಯಕಿ.್ತ ಅದಕ್ಕೆ ತಪ್ಪು ಕಲ್ಪನೆ ಸಲ್ಲದು ಅವರಲ್ಲಿ ಸೇವಾ ಮನೋಭಾವ, ನುಡಿದಂತೆ ನಡೆದುಕೊಳ್ಳುವ ಬದ್ಧತೆ ಇದೆ. ಹಾಗಾಗಿ   ಜನರ ಸೇವೆ ಮಾಡುವ ವ್ಯಕ್ತಿ ಕೆ.ಎನ್.ರಾಜಣ್ಣ   ಅವರಿಗೆ ಈ ಸಲ  ರೆಡ್ಡಿ ಜನಾಂಗ ಕೈಜೋಡಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುವಂತೆ  ಕಿವಿ ಮಾತು ಹೇಳಿದರು.  ಮುಖ್ಯ ಅತಿಥಿ ಕೆ.ಎನ್.ರಾಜಣ್ಣ  ರೆಡ್ಡಿ ಸಮುದಾಯ ಶಕ್ತಿ   ಮೀರಿ ಸ್ವಸಾಮರ್ಥ್ಯದಿಂದ ಕೃಷಿ ಮಾನದ ಬದುಕು ನಡೆಸುವ ಜನಾಂಗ. ಮಧುಗಿರಿ ತಾಲೂಕಿನಲ್ಲಿ ಸತತ ಬರಗಾಲಕ್ಕೆ ತುತ್ತಾಗಿ ಮಳೆ, ಬೆಳೆ ಇಲ್ಲದೆ ಸಾಲದ ಸುಳಿಗೆ ಸಿಕ್ಕಿದ್ದಾರೆ. ಈ ಪ್ರದೇಶದ ಕೃಷಿಕರು, ರೈತರು, ಕೂಲಿ ಕಾರ್ಮಿಕರು ಬದುಕು ಹಸನಾಗಬೇಕಾದರೆ ಶಾಶ್ವತ ನೀರಾವರಿ ಸೌಲಭ್ಯ ದೊರಕಿದಾಗ ಮಾತ್ರ ಜನ ನೆಮ್ಮದಿ ಜೀವನ ನಡೆಸಲು ಸಾಧ್ಯ, ಹಾಗಾಗಿ ನೀರಾವರಿ ಹೋರಾಟ, ಮಧುಗಿರಿ ಉಪವಿಭಾಗವನ್ನು ಜಿಲ್ಲಾ ಕೇಂದ್ರ ಹಾಗೂ ವಿವಿಧ ಮೂಲಗಳಿಂದ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸಲು ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆಎಂದರು.         
ಮುಖಂಡ ಪಿ.ಸಿ.ಕೆ.ರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿ ರಾಜಣ್ಣ ಸಮರ್ಥ ನಾಯಕ, ಈ ಸಲ ಅವರ ಗೆಲವು ಖಚಿತ ಎಂದರು.
ಜನಪರ ಕಾಳಜಿ: ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಜನಪರ ಕಾಳಜಿ ಉಳ್ಳ ಕೆ.ಎನ್, ರಾಜಣ್ಣ ಅವರನ್ನು ಈ ಸಲ ಅತ್ಯಧಿಕ ಮತಗಳಿಂದ ವಿಧಾನಸಭೆಗೆ ಆಯ್ಕೆ ಮಾಡಿ ಕಳಿಸುವಂತೆ ರೆಡ್ಡಿ ಜನಾಂಗಕ್ಕೆ ಕರೆ ನೀಡಿದರು. ರಾಜಶೇಖರ ರೆಡ್ಡಿ, ವಕೀಲ ಎಚ್.ಕೆ.ವಿ.ರೆಡ್ಡಿ, ಪಿ.ಸಿ. ಕೃಷ್ಣಾರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ತುಂಗೋಟಿ ರಾಮಣ್ಣ,  ಗೋಪಾಲ್, ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ ,ಉಪಾಧ್ಯಕ್ಷೆ ಸಿದ್ದಗಂಗಾಂಭಿಕೆ, ಸುಕನ್ಯರೆಡ್ಡಿ, ನಾರಾಯಣರೆಡ್ಡಿ, ಮಂಜುಳಾ, ವೆಂಕಟರಂಗಾರೆಡ್ಡಿ,ಶ್ರೀನಿವಾಸರೆ ರೆಡ್ಡಿ, ನಾಗಲಿಂಗಾರೆಡ್ಡಿ, ನಂಜುಂಡರೆಡ್ಡಿ, ವಕೀಲ ಕೇಶವರೆಡ್ಡಿ, ವೆಂಕಟಕೃಷ್ಣರೆಡ್ಡಿ, ಪ್ರಭಾಕರರೆಡ್ಡಿ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.
ರಾಜಶೇಖರರೆಡ್ಡಿ ಸ್ವಾಗತಿಸಿ ರಘುನಾಥ್ ರೆಡ್ಡಿ ನಿರೂಪಿಸಿ, ಅಶ್ವತ್ಥನಾರಾಯಣರೆಡ್ಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments