ರೇಸ್-2 ಸಿನಿಮಾ ನಿಷೇಧಕ್ಕೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ
ತುಮಕೂರು: ರೇಸ್-2 ಹಿಂದಿ ಸಿನಿಮಾಕ್ಕೂ ವಿವಾದ ಮೆತ್ತಿಕೊಂಡಿದ್ದು ಈ ಚಿತ್ರದ ಪೋಸ್ಟರ್‌ಗಳು ಮುಸ್ಲಿಂ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ನೇತಾರರು ಪ್ರತಿಭಟನೆ ನಡೆಸಿದರು.
ರೇಸ್-2 ಚಿತ್ರದ ಪೋಸ್ಟರ್‌ನಲ್ಲಿ ಮುಸ್ಲಿಂ ಪವಿತ್ರ ಕುರಾನ್ ಸಾಲುಗಳನ್ನು ಮುದ್ರಿಸಲಾಗಿದೆ. ಅಲ್ಲದೇ ಚಿತ್ರ ತಾರೆಗಳ ಹಿಂಭಾಗ ಕುರಾನ್ ವಾಕ್ಯಗಳು ಮುದ್ರಿತವಾಗಿದೆ. ಈ ಪೋಸ್ಟರ್‌ಗಳನ್ನು ನಗರದ ಹಲವು ಕಡೆ ಅಂಟಿಸಲಾಗಿದೆ.
ಇದರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ನಿಷೇಧಿಸಬೇಕು ಎಂದು ಮುಸ್ಲಿಂ ಸಮುದಾಯದ ನೇತಾರರು ಆಗ್ರಹಿಸಿದ್ದಾರೆ.
ಅಲ್ಲದೇ ನಗರದಲ್ಲಿರುವ ಎಲ್ಲಾ ಪೋಸ್ಟರ್‌ಗಳನ್ನು ತೆಗೆದು ಹಾಕಬೇಕು. ಮುಸ್ಲಿಂ ಭಾವನೆಗಳಿಗೆ ಸ್ಪಂದಿಸಿ ನಮಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ರೀತಿ ಮುಸ್ಲಿಮರ ಪವಿತ್ರ ಕುರಾನ್‌ನ ವಾಕ್ಯಗಳನ್ನು ಈ ರೀತಿ ಚಿತ್ರಿಸುವುದರ ವಿರುದ್ಧ ಹಾಗೂ ಭಿತ್ತಿ ಚಿತ್ರಗಳನ್ನು ಮುದ್ರಿಸಿ ಎಲ್ಲಾ ಗೋಡೆಗಳಲ್ಲಿ, ಗಲೀಜು ಜಾಗಗಳಲ್ಲಿ ಅಂಟಿಸಿರುವ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೇ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದ ರೀತಿ ಸ್ಪಂದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.