ಚಿ.ನಾ.ಹಳ್ಳಿ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ
ಚಿಕ್ಕನಾಯಕನಹಳ್ಳಿ: ಪಕ್ಷದಲ್ಲಿರುವ ಆಂತರಿಕ ಪ್ರಜಾಭುತ್ವದಂತೆ ಸೋಮವಾರ ತಾಲೂಕು ಅಧ್ಯಕ್ಷರನ್ನು ಬದಲಾಯಿಸಿ ನೂತನ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ನುಡಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪಕ್ಷದ ತಾಲೂಕು ಅಧ್ಯಕ್ಷರ ಆಯ್ಕೆಯ ನಂತರ ಮಾತನಾಡುತ್ತಾ, ಚುನಾವಣಾ ಸಮಯದಲ್ಲಿ ಪಕ್ಷ ಮೂರು ಹೋಳಾದರು ಸಹ ಕಾರ್ಯಕರ್ತರ ಶ್ರಮದಿಂದ ಪಕ್ಷಕ್ಕೆ ಸಂಕಷ್ಟ ಸಮಯದಲ್ಲಿ ಮೂವತ್ತು ಸಾವಿರದವರಗೆ ಮತಗಳು ಬಂದಿವೆ. ಇದರಿಂದ ಕ್ಷೇತ್ರದಲ್ಲಿ ಪಕ್ಷದ ಬೇರು ಶಕ್ತಿಯುತವಾಗಿವೆ ಎಂಬುದು ದೃಢಪಟ್ಟಿದೆ. ನಮಗೆ ಕಡಿಮೆ ಮತಗಳು ಬರಲು ಯಡಿಯೂರಪ್ಪನವರ ಅಲೆ ಕ್ಷೇತ್ರದಲ್ಲಿ ಬಲವಾಗಿದ್ದರಿಂದ ನಾವು ಬಹಳ ಕಡಿಮೆ ಮತಗಳಿಸುವಂತಾಯಿತು. ಹಿಂದೆ ನನ್ನಿಂದ ಯಾರಿಗೇನಾದರು ಮನಸ್ಸಿಗೆ ನೋವಾಗುವಂತಹ ಕಹಿ ಘಟನೆ ನಡೆದಿದ್ದರೆ ತಪ್ಪನ್ನು ಮನ್ನಿಸಿ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಮತ್ತು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಫಲಿತಾಂಶಕ್ಕೂ ಪಕ್ಷದ ಸಂಘಟನೆಗು ಸಂಬಂದವಿಲ್ಲ. ಚುನಾವಣೆ ತಾತ್ಕಾಲಿಕ, ಸಂಘಟನೆ ನಿರಂತರ. ಪ್ರಸಕ್ತ ಸಂದರ್ಭ ಸಂಘಟನೆಗೆ ಪ್ರಶಸ್ತವಾಗಿದೆ. ನಾನು ನಿರಾಶಾವಾದಿಯಲ್ಲ ಎಂದರು.