ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾನಪದ ಕಲೆಗಳ ಉಳಿವಿಗೆ ಆದ್ಯತೆ ನೀಡಿ: ಕೆ.ಷಡಕ್ಷರಿ

Vishwanath S
Updated On : 3 Jul 2013, 12:30 pm

ಕನ್ನಡಪ್ರಭ ವಾರ್ತೆ ,  ತಿಪಟೂರು ,  ಜು. 2
ಇಂದಿನ ದಿನಗಳಲ್ಲಿ ಜಾನಪದ, ರಂಗಭೂಮಿ ಮತ್ತು ಸೋಬಾನ ಗೀತೆಗಳು ವಿನಾಶದಂಚಿಗೆ ತಲುಪುತ್ತಿದ್ದು, ಕಲೆ ಜೀವಂತವಾಗಿ ಉಳಿಯಬೇಕಾದರೆ ತಾಲೂಕಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
 ನಗರದ ಸಂಕಲ್ಪ ಶ್ರೀ ಹೆಲ್ತ್ ಎಜುಕೇಷನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಗೀತೆ, ರಂಗಗೀತೆ ಮತ್ತು ಸೋಬಾನ ಗೀತೆಗಳ ಸ್ಪರ್ಧೆ ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗಗಳಲ್ಲಿ ಅಲ್ಪಸ್ವಲ್ಪ ಈ ಕಲೆಗಳು ಉಳಿದುಕೊಂಡಿದ್ದು, ಇವುಗಳ ಉಳಿವಿಗಾಗಿ ಹೆಚ್ಚು ಆದ್ಯತೆ ನೀಡಬೇಕು. ಕಲಾವಿದರಿಗೆ ಉತ್ತಮ ರೀತಿಯ ಸೇವೆ ದೊರೆಯಬೇಕೆಂದರು.
ಸಂಕಲ್ಪ ಶ್ರೀ ಹೆಲ್ತ್ ಎಜುಕೇಷನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಡಿ.ಆರ್.ಬಸವರಾಜು ಮಾತನಾಡಿ ಕಲಾವಿದರಿಗೆ ಉತ್ತೇಜನ ನೀಡುವಂತಹ ಹಲವು ಕಾರ್ಯಕ್ರಮಗಳು ಸಂಸ್ಥೆಯ ಮುಖಾಂತರ ನಡೆಸುವುದಾಗಿ ತಿಳಿಸಿದರು.
ರಂಗ ಕಲಾವಿದ ಮತ್ತು ಚಲನಚಿತ್ರ ಕಲಾವಿದರಾದ ಕುಣಿಗಲ್ ನಾಗಭೂಷಣ್ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ಸಂಸ್ಥೆಯ ವತಿಯಿಂದ ಯಕ್ಷಗಾನ ಕಲಾವಿದ ಚನ್ನಬಸಪ್ಪ, ಜಾನಪದ ಕಲಾವಿದರಾದ ಮಲ್ಲಮ್ಮ,  ವಸಂತಕುಮಾರ ಅವರಿಗೆ ಸನ್ಮಾನಿಸಲಾಯಿತು. ನಂತರ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿಧರಿಗೆ ಬಹುಮಾನ ವಿತರಿಸಲಾಯಿತು.
ಕೆಜೆಪಿ ತಾ.ಅಧ್ಯಕ್ಷ ರಘುಪತಿ, ರಾಮಣ್ಣ, ಬಸವರಾಜು, ರಂಗಕಲಾವಿಧೆ ಹೇಮಲತಾ, ಲಿಂಗಪ್ಪ ಸಂಸ್ಥೆಯ ನಿರ್ದೇಶಕರಾದ ಲಕ್ಷೀದೇವಿ, ಪ್ರೇಮ, ಕಮಲ, ದಯಾನಂದ, ಯೋಗೀಶ್, ಲಕ್ಷ್ಮೀಲತಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement