ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಹಸು ಸಾವು

Vishwanath S
Updated On : 3 Jul 2013, 12:31 pm

ಕ.ಪ್ರ. ವಾರ್ತೆ ,  ಕುಣಿಗಲ್ ,  ಜು.2
ಬೆಸ್ಕಾಂ ಇಲಾಖಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದ ಹಸು ಮೃತಪಟ್ಟರೆ, ಹಸವನ್ನು ಮೇಯಿಸಲು ಹೊರಟಿದ್ದ ಮಹಿಳೆ ವಿದ್ಯುತ್ ಆಘಾತಕ್ಕೆ  ಸಿಲುಕಿ, ಅದೃಷ್ಟವಶಾತ್ ಪಾರಾದ ಘಟನೆ ಮಂಗಳವಾರ ಬೆಳಗ್ಗೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಪಟ್ಟಣದ ಹೊರವಲಯದ ಕೆಆರ್‌ಎಸ್ ಅಗ್ರಹಾರದ ಗದ್ದೆ ಪ್ರದೇಶದಲ್ಲಿ, ಮುತ್ತುಗದಹಳ್ಳಿಯ ಜಯಮ್ಮ ಎಂಬುವವರು ಸೀಮೆಹಸುವನ್ನು ಮೇಯಿಸಲು ಹೊಗುತ್ತಿದ್ದಾಗ, ಗದ್ದೆಬಯಲಿನ ರಸ್ತೆಯಲ್ಲಿ ತುಂಡಾಗಿ ಬಿದಿದ್ದ ವಿದ್ಯುತ್ ವೈರ್ ತುಳಿದ ಕೂಡಲೆ ಹಸು ಚೀರಾಡಿ ಕೆಳಗೆ ಬಿದ್ದು ಮೃತಪಟ್ಟಿತು. ಕೆಳಗೆ ಬಿದ್ದ ಹಸುವನ್ನು ಮುಟ್ಟಿದ ಜಯಮ್ಮನವರಿಗೂ ವಿದ್ಯುತ್ ಆಘಾತಯಿತಾದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು.
ಕಳೆದ ಕೆಲದಿನಗಳ ಹಿಂದೆಯೇ, ಸದರಿ ಪ್ರದೇಶದಲ್ಲಿ ತುಂಡಾದ ವೈರ್ ಭೂಮಟ್ಟದಿಂದ ತೀರಾ ಕೆಳಮಟ್ಟದಲ್ಲೆ ಇದ್ದು ಸಿಬ್ಬಂದಿಯ ಗಮನಕ್ಕೆ ತಂದರೂ ನಿರ್ವಹಣೆ ಮಾಡಿಲ್ಲವೆಂದು ರೈತರು ದೂರಿದ್ದು, ವಿದ್ಯುತ್ ಅಘಾತದಿಂದ ಸೀಮೆಹಸು ಮೃತಪಟ್ಟು ಮಹಿಳೆ ಸ್ವಲ್ಪದರಲ್ಲೆ ಪಾರಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿದಾಗ, ರೈತರು  ತರಾಟೆಗೆ ತೆಗೆದುಕೊಂಡರು. ಕೊನೆಗೆ ವಿಧಿ ಇಲ್ಲದೆ ಗ್ರಾಪಂ ಮಾಜಿ ಅಧ್ಯಕ್ಷರೊಬ್ಬರ ನೇತೃತ್ವದಲ್ಲಿ ರಾಜಿ ಸಂಧಾನ ನಡೆದು, ಮೃತ ಹಸುವಿಗೆ ಪರಿಹಾರವಾಗಿ ಸಿಬ್ಬಂದಿಗಳು ನಾಲ್ಕು ಸಾವಿರ ರು. ನೀಡುವ ಭರವಸ ಮೇರೆಗೆ, ಸಮಸ್ಯೆ ಇತ್ಯರ್ಥಗೊಂಡಿದೆ ಎನ್ನಲಾಗಿದೆ. ಈ ಭಾಗದಲ್ಲಿ ಬಹುತೇಕ ವಿದ್ಯುತ್ ವೈರ್‌ಗಳು ತೀರಾ ಕೆಳ ಮಟ್ಟದಲ್ಲಿದ್ದು ವಿದ್ಯುತ್ ಅವಘಡಗಳು ಸಂಭವಿಸದಂತೆ ಸಂಬಂಧಪಟ್ಟ ಸಿಬ್ಬಂದಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರಾದ ಕೃಷ್ಣಪ್ಪ, ಸೂರಿ,ಶ್ರೀನಿವಾಸ್ ಅಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement