ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಗರದಲ್ಲಿ ಆರ್ಟಿಸಾನ್ ಹಬ್ ನಿರ್ಮಾಣ

Vishwanath S
Updated On : 3 Jul 2013, 12:29 pm

ಕ.ಪ್ರ. ವಾರ್ತೆ ,  ತುಮಕೂರು ,  ಜು.2
ರಾಜ್ಯ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿರ್ದೇಶನದಂತೆ ತುಮಕೂರಿನಲ್ಲಿ ಆರ್ಟಿಸಾನ್ ಹಬ್ ನಿರ್ಮಿಸುವ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಿತು.
ಈ ಕೇಂದ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಲು ಅಗತ್ಯ ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಸಂಸದರು ಬರೆದಿರುವ  ಪತ್ರಗಳು, ಫೋರಂ ಹೊರತಂದಿರುವ ಕಿರು  ಹೊತ್ತಿಗೆ ಮತ್ತು ಪಿ.ಪಿ.ಟಿ ಹಾಗೂ ವಿವಿಧ  ಸಂಘಟನೆಗಳ ಪದಾಧಿಕಾರಿಗಳು ಮತ್ತು  ಅಧಿಕಾರಿಗಳು ನೀಡಿರುವ ಸಲಹೆಗಳನ್ನು  ಒಳಗೊಂಡಂತೆ ಕೆಳಕಂಡ ವಿಷಯವಾರು  ನಿರ್ಣಯಗಳನ್ನು ಕೈಗೊಂಡು  ಅಗತ್ಯ ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಎಲ್ಲಾ ಸಮುದಾಯಗಳ ಬಡ  ಉದಯೋನ್ಮುಖ ಕೌಶಲ್ಯದ ಆಸಕ್ತಿ ಪ್ರತಿಭೆಗಳನ್ನು  ಒಗ್ಗೂಡಿಸುವ ಮೂಲಕ ಸ್ವಾಭಿಮಾನದ ಬದುಕಿಗೆ-ಕಲಿಕೆಗೆ-ದುಡಿಮೆಗೆ ಬಸವಣ್ಣನವರ ಅನುಭವ ಮಂಟಪದಂತೆ ಎಲ್ಲಾ ಜನಾಂಗದವರಿಗೂ ಅವಕಾಶ ಕಲ್ಪಿಸುವ ಸಂಶೋಧಿಸು-ಉಪಯೋಗಿಸು-ಸಂಪಾದಿಸು ಎಂಬ ಮನೋಭೂಮಿಕೆ ಉಳ್ಳವರ ಆರ್ಟಿಸಾನ್ ಹಬ್,  ರೀಸರ್ಚ್ ಹಬ್ ಕ್ಲಸ್ಟರ್ ಹಬ್‌ನ ಕರ್ನಾಟಕ ಸರ್ಕಾರದ ಹೊಸ ಆಲೋಚನೆಯ ಉದ್ಯಮಿಯಾಗು-ಉದ್ಯೋಗ ನೀಡು ಅಭಿಯಾನದ ಪರಿಕಲ್ಪನೆಯಲ್ಲಿ ರೂಪಿತಗೊಳ್ಳಲಿದೆ. ಅವರವರ ಜನಾಂಗದ ಕುಲಕಸುಬುಗಳ ಕ್ಲಸ್ಟರಸ್ ಸ್ಥಾಪನೆ, ಸಂಶೋಧನೆ ಮತ್ತು ಜಿಲ್ಲೆಯ ಮೂಲಭೂತ  ಸೌಕರ್ಯಗಳ ಅಧ್ಯಯನಕ್ಕೆ ಆದ್ಯತೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಭವಿಷ್ಯ ನಿರ್ಮಾಣಕ್ಕೆ ಯೋಜನೆ: ತುಮಕೂರು ಜಿಲ್ಲೆಯಲ್ಲಿ ವಾಸವಿರುವ ಸರ್ವ ಜನಾಂಗದ ಸಂಘಟನೆಗಳ ಮಾರ್ಗದರ್ಶನದಲ್ಲಿ ಬಡ ಪ್ರತಿಭೆಗಳ ಭವಿಷ್ಯ ನಿರ್ಮಾಣಕ್ಕೆ ಯೋಜನೆ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು  ತೀರ್ಮಾನಿಸಲಾಯಿತು.
ವಿದ್ಯಾರ್ಥಿ ಪ್ರತಿಭೆಗಳಿಗೆ ಹಾಸ್ಟೆಲ್ ಸೌಲಭ್ಯ, ದುಡಿಯುವವರಿಗೆ ದುಡಿಮೆ ಸೌಲಭ್ಯ ಮತ್ತು ಸಂಶೋಧಕರಿಗೂ ಅಗತ್ಯ ಸೌಲಭ್ಯ ಒದಗಿಸುವುದು.
50 ಹೆಣ್ಣು ಮತ್ತು 50 ಗಂಡು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವುದು. ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಸಂಘಟನೆಗಳ ಹಾಗೂ ಆಸಕ್ತರನ್ನೊಳಗೊಂಡ ಒಂದೊಂದು ಎಸ್.ಪಿ.ವಿ ರಚನೆ ಮುಖಾಂತರ ವ್ಯವಸ್ಥೆ ಕಲ್ಪಿಸುವುದು. ಉಳ್ಳವರು ಆಯಾ ಸಮುದಾಯದ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಲು ಮುಕ್ತ ಅವಕಾಶ ಕಲ್ಪಿಸುವುದು. ಎಲ್ಲಾ ಸಮುದಾಯದ ನಿರ್ಗತಿಕರಿಗೆ ಹೊಸ ಕೈಗಾರಿಕೋದ್ಯಮಿಗಳಾಗಲು ಶೇ.100 ರಷ್ಟು ಆರ್ಥಿಕ ನೆರವಿನ ವಿಶೇಷ ಯೋಜನೆ ರೂಪಿಸುವುದು. ಒಂದು ಎಸ್.ಪಿ.ವಿ ಗೆ ಕನಿಷ್ಠ 3 ರಿಂದ 10 ಎಕರೆ ಜಮೀನನ್ನು ಸರ್ಕಾರದಿಂದ ರಿಯಾಯಿತಿ ದರದಲ್ಲಿ ಮಂಜೂರಾತಿಗೆ ಕ್ರಮ ಕೈಗೊಳ್ಳುವುದು.
ಅಗತ್ಯ ಕ್ರಮ: ರಾಷ್ಟ್ರೀಯ ಹೂಡಿಕೆ ಮತ್ತು  ಉತ್ಪಾದನಾ ವಲಯ ಯೋಜನೆಯಡಿಯಲ್ಲಿನ 12,500 ಎಕರೆ ಪ್ರದೇಶದಲ್ಲಿ ಶೇ. 30 ರಷ್ಟು ಪ್ರದೇಶವನ್ನು ಎಂ.ಎಸ್.ಎಂ.ಇ ಗೆ ಮೀಸಲಿಡಲು ಅವಕಾಶ ಕಲ್ಪಿಸುವುದರಿಂದ ನಿಮ್ಜ್ ಯೋಜನೆಯಡಿ ಅಥವಾ ಪ್ರತ್ಯೇಕವಾಗಿ ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ ಕ್ಲಸ್ಟರ್ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಒಂದೇ ಕಡೆ ಸುಮಾರು 150  ಆರ್ಟಿಸಾನ್ ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಮೂಲಕ ಆರ್ಟಿಸಾನ್ ಹಬ್ ನಿರ್ಮಿಸಲು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಪ್ರಸ್ತಾಪಿಸಿರುವ 150 ಆರ್ಟಿಸಾನ್ ಕ್ಲಸ್ಟರ್‌ಗಳಿಗೆ, ಪ್ರತಿ ಕ್ಲಸ್ಟರ್ ಒಂದಕ್ಕೆ 30 ಜನರಂತೆ 4500 ಜನರನ್ನು ಆಯ್ಕೆ ಮಾಡಬೇಕಾಗಿದ್ದು ತುಮಕೂರು ಜಿಲ್ಲೆಯಲ್ಲಿ ವಾಸಿಸಿರುವ, ಸುಮಾರು 100  ಸಮುದಾಯದಿಂದ ಕಡ್ಡಾಯವಾಗಿ ಪ್ರತಿ ಸಮುದಾಯದ 45 ಜನ ಇರುವಂತೆ ಫಲಾನುಭವಿಗಳನ್ನು ಗುರುತಿಸಲು, ಒಂದು ವೇಳೆ ಜಿಲ್ಲೆಯಲ್ಲಿ ಪ್ರತಿ ಸಮುದಾಯದ 45 ಜನರ ಆಯ್ಕೆಗೆ ಸಂಖ್ಯೆ ಕೊರತೆ ಕಂಡುಬಂದಲ್ಲಿ, ಈ ಸಂಖ್ಯೆ ಕಾಯ್ದಿರಿಸಿಕೊಳ್ಳಲು ರಾಜ್ಯದ ಇತರೆ ಭಾಗದಿಂದ ಆಯ್ಕೆ ಮೂಲಕ ಸರಿದೂಗಿಸಕೊಳ್ಳಲು ನಿಯಮಾವಳಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಮುಖ್ಯಮಂತ್ರಿ ಬಳಿ ನಿಯೋಗ: ಸಂಸದ ಜಿ.ಎಸ್. ಬಸವರಾಜು ಅವರು ಈಗಾಗಲೇ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳ  ನಿಯೋಗಕ್ಕೆ ಸಮಯ ನೀಡಲು ಮುಖ್ಯ  ಮಂತ್ರಿಗಳಿಗೆ, ಸಣ್ಣ ಕೈಗಾರಿಕಾ ಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ, ಆರ್ಟಿಸಾನ್ ಹಬ್ ನಿರ್ಮಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಹಾಗೂ ಮುಂಗಡ ಪತ್ರದಲ್ಲಿ ಅಗತ್ಯ ಹಣ ಕಾಯ್ದಿರಿಸುವ ಬಗ್ಗೆ, ಗಮನ ಸೆಳೆಯಲು ಮುಖ್ಯ ಮಂತ್ರಿಗಳ ಬಳಿ ನಿಯೋಗ ಹೋಗಲು ಅಗತ್ಯಕ್ರಮ ಕೈಗೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement