ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಿ: ಶಾಸಕ ಕೆ.ಎನ್. ರಾಜಣ್ಣ

Vishwanath S
Updated On : 7 Jul 2013, 12:37 pm

ಮಧುಗಿರಿ: ಪಟ್ಟಣದ 4 ಕಿ.ಮೀ. ವ್ಯಾಪ್ತಿಯಲ್ಲಿ  ಸಂಪೂರ್ಣ ಹಾಳಾಗಿ ಆಳುದ್ದ ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸಿ ಡಾಂಬರು ಹಾಕುವಂತೆ 234 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಜೆಎಂಸಿ ಗುತ್ತಿಗೆದಾರರಿಗೆ  ಶಾಸಕ ಕೆ.ಎನ್.ರಾಜಣ್ಣ ತಾಕೀತು ಮಾಡಿದರು.
ಇತ್ತೀಚೆಗೆ ಅವರು ಮಧುಗಿರಿ ಪಟ್ಟಣದ ಪಾವಗಡ ವೃತ್ತದಲ್ಲಿ ಜೋಡಿ ರಸ್ತೆ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ವ್ಯಾಪ್ತಿ ಪ್ರದೇಶದ 4 ಕಿ.ಮೀ. ವರೆಗೆ ಆಳುದ್ದ ಗುಂಡಿ ಬಿದ್ದು ಪಟ್ಟಣದ ನಿವಾಸಿಗಳ ಮನೆಗೆ ಧೂಳು ವ್ಯಾಪಿಸಿ ಮನೆ ಮಂದಿಗೆ ವಿವಿಧ ರೋಗ ರುಜೀನಗಳು ಹರಡುತ್ತಿವೆ ಎಂದು ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದಾಗ ತಕ್ಷಣ ಜೆಎಂಸಿ ಗುತ್ತಿಗೆದಾರ ಮದನ್ ಅವರನ್ನು ಸ್ಥಳಕ್ಕೆ  ಕರೆಸಿ ಪಟ್ಟಣದ ವ್ಯಾಪ್ತಿ ಪ್ರದೇಶದಲ್ಲಿ ಮೊದಲು ರಸ್ತೆ ಸರಿಪಡಿಸಿ ಡಾಂಬರು ಹಾಕುವಂತೆ ಸಲಹೆ  ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ದ್ವಾರಕನಾಥ್, ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ಸೈಯದ್, ಪುರಸಭೆ ಸದಸ್ಯ ಅಯೂಬ್, ಅಲೀಂ,ಖುದ್ದುಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಜೆಎಂಸಿ ಗತ್ತಿಗೆದಾರ ಮದನ್ ಮತ್ತಿತರರು ಉಪಸ್ಥಿತರಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement