ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗೋಡೆಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

Vishwanath S
Updated On : 7 Jul 2013, 12:39 pm

ಕುಣಿಗಲ್: ದುಬಾರಿ ರೇಸ್ ಬೈಕ್‌ಗಳನ್ನೇರಿ ಜಾಲಿ ರೈಡ್‌ಗೆಂದು ಬಂದು, ಹಿಂದಿರುಗುತ್ತಿದ್ದ ರೇಸ್ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದವ ಗಂಭೀರವಾಗಿ ಗಾಯಗೊಂಡರೆ, ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ರಾಹೆ48ರ ಬೈಪಾಸ್ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ, ಮೃತನನ್ನು ಬೆಂಗಳೂರು ಮಡಿವಾಳ ಮಾರುತಿ ನಗರದ  ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ರೆಡ್ಡಿಯವರ ಪುತ್ರ ತೇಜಸ್ (19) ಎಂದು ಗುರುತಿಸಲಾಗಿದ್ದು, ಈತ ಶನಿವಾರ ಬೆಳಗ್ಗೆ ತನ್ನ ಸ್ನೇಹಿತ ವಿಶ್ವಾಸ್ (21)ನ ಹೊಂಡಾ ಹುಂಗೈನಲ್ಲಿ   ಇತರೆ ಸ್ನೇಹಿತರ ಆರು ರೇಸ್ ಬೈಕ್‌ಗಳ ಜೊತೆಯಲ್ಲಿ ಬೆಂಗಳೂರಿನಿಂದ ಸಕಲೇಶಪುರಕ್ಕೆ ಜಾಲಿ ರೈಡ್‌ಗೆ ತೆರಳಿದರು. ಸಕಲೇಶಪುರ ಮಾರ್ಗದಲ್ಲಿ ಮಳೆ ಎಂಬ ಮಾಹಿತಿ ಮೇರೆಗೆ, ಜಾಲಿರೈಡ್ ಅರ್ಧಕ್ಕೆ ನಿಲ್ಲಿಸಿ, ಯಡೆಯೂರು ಸಮೀಪ ಉಪಹಾರ ಸೇವಿಸಿಕೊಂಡು, ಪುನಃ ಬೆಂಗಳೂರಿಗೆ ಹಿಂದಿರುಗುವ ಮಾರ್ಗ ಮಧ್ಯೆ   ಪಟ್ಟಣದ ರಾಹೆ 48ರ ಬೈಪಾಸ್ ರಸ್ತೆಯ ಹೇರೂರು ಗ್ರಾಮದ ಬಳಿ ನಿರ್ಮಿಸಲಾಗಿರುವ ಸೇತುವೆಗೆ, ಅತಿವೇಗವಾಗಿ ಸಾಗುತ್ತಿದ್ದ ಬೈಕ್, ಚಾಲಕನ ನಿಯಂತ್ರಣ ತಪ್ಪಿ,  ಡಿಕ್ಕಿಹೊಡೆದ ರಭಸಕ್ಕೆ ಬೈಕ್‌ನ ಮುಂಭಾಗ ಛಿದ್ರಗೊಂಡು, 25 ಅಡಿ ಆಳ ಕೆಳಗೆ ಎಸೆಯಲ್ಪಟ್ಟರು. ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆಯಲ್ಲಿ ತೇಜಸ್ ಸ್ಥಳದಲ್ಲೆ ಮೃತಪಟ್ಟರೆ, ವಿಶ್ವಾಸ್‌ನ ಎಡತೋಳಿನ ಮೂಳೆ, ಕಾಲು ಮೂಳೆ ಮುರಿದು, ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement