ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಧರ್ಮದ ದಿಕ್ಸೂಚಿಯೇ ಬಾಳಿಗೆ ಅಡಿಪಾಯ'

Vishwanath S
Updated On : 7 Jul 2013, 12:37 pm

ತಿಪಟೂರು: ಬದುಕು ಬಲಗೊಳ್ಳಲು ಆಧ್ಯಾತ್ಮದ ಅರಿವು ಬೇಕು. ಮಾನವನ ಮಾನಸಿಕ ಶಾಂತಿ, ನೆಮ್ಮದಿಗೆ ಧರ್ಮ ಪರಿಪಾಲನೆ ಅವಶ್ಯಕವಾಗಿದ್ದು, ಧರ್ಮದ ದಿಕ್ಸೂಚಿ ಉಜ್ವಲ ಬಾಳಿಗೆ ಅಡಿಪಾಯವಿದ್ದಂತೆ. ಭೌತಿಕ ಬದುಕಿನ ಉನ್ನತಿಗೆ ಆಧ್ಯಾತ್ಮದ ಹಸಿವು ಅಗತ್ಯವೆಂದು ಬಾಳೆಹೊನ್ನೂರು ರಂಭಾಪುಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಸತ್ತೇರಾಮನಹಳ್ಳಿಯಲ್ಲಿ ಚನ್ನಬಸವೇಶ್ವರಸ್ವಾಮಿ ದೇವಸ್ಥಾನದ ಕಳಸಾ ರೋಹಣ ಅಂಗವಾಗಿ ನಡೆದ ಜನ ಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಬದುಕು ಅಸ್ತವ್ಯಸ್ತ: ಇಂದು ಮಾನವನ ಅತಿಯಾದ ಸ್ವಾರ್ಥದಿಂದಾಗಿ ಸಾಮಾಜಿಕ ಬದುಕು ಅಸ್ತವ್ಯಸ್ತಗೊಳ್ಳುತ್ತಿದೆ. ವಿದ್ಯೆ ಇದ್ದರೂ ವಿನಯ ಇಲ್ಲದಂತಾಗಿದೆ. ಬುದ್ದಿಯಿದ್ದರೂ ಧರ್ಮದಲ್ಲಿ ಶ್ರದ್ದೆ ಮರೆಯಾಗುತ್ತಿದ್ದು, ವಿವೇಚನೆಯ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ವಿಜ್ಞಾನ ಬೆಳೆದಂತೆ ಅಸಮಾಧಾನ ಹೆಚ್ಚುತ್ತಲಿದ್ದು, ಮಾತು ಬಲ್ಲವರಲ್ಲಿ ಕೃತಿ ಕಡಿಮೆಯಾಗುತ್ತಿದೆ. ಸಾಧನೆ ಇಲ್ಲದ ಬೋಧನೆ ಮಾತ್ರ ನಡೆಯುತ್ತಿದೆ ಎಂದರು.
ಜಾತಿ ಸಂಘರ್ಷಕ್ಕೆ ಕೊನೆ ಇಲ್ಲವೆ?: ಜಾತಿ ಬೆಳೆದು ಪರಸ್ಪರ ಸಂಘರ್ಷ ಹೆಚ್ಚಿ ಪ್ರೀತಿ ವಿಶ್ವಾಸಗಳು ಇಲ್ಲದಂತಾಗಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಧರ್ಮವೊಂದೇ ಆಶಾಕಿರಣ. ಆಡಿದಂತೆ ಜೀವನದಲ್ಲಿ ನಡೆಯುವುದೇ ನಿಜವಾದ ಧರ್ಮ. ಅಶಾಂತಿ, ಅತೃಪ್ತಿ ಮತ್ತು ಅಸಮಾಧಾನದಿಂದ ತತ್ತರಿಸುವ ಇಂದಿನ ದಿನಗಳಲ್ಲಿ ಪರಸ್ಪರ ಅರಿವು, ತಾಳ್ಮೆ, ಸೌಜನ್ಯತ್ವ ಮೂಡಿ ಬಂದಾಗ ಎಲ್ಲೆಡೆ ಶಾಂತಿ ನೆಮ್ಮದಿ ಕಾಣಲು ಸಾಧ್ಯ ಎಂದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ಧರ್ಮ ಆಚರಣೆ ಗಾಗಿ ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆದು ಮಾನವ ಧರ್ಮ ಒಂದೇ ಎಂಬಂತೆ ಸನ್ಮಾರ್ಗದಲ್ಲಿ ನಡೆಯಬೇಕಿದೆ. ಗ್ರಾಮಗಳಲ್ಲಿ ನಡೆಯುವ ಧಾರ್ಮಿಕ ಸಮಾರಂಭದಿಂದ ಮಾನವನ ನಿತ್ಯ ಜಂಜಾಟದಿಂದ ಹೊರ ಬರಬಹುದಾಗಿದೆ. ಮಠಗಳು ಸಮಾಜದ ಪರಿವರ್ತನೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿವೆ. ಹಿಂದಿನ ಕಾಲದಲ್ಲಿ ಮಠಗಳ ಭಕ್ತರ ಹೊಟ್ಟೆ ಹಸಿವನ್ನು ನೀಗಿಸುತ್ತಿದ್ದವು. ಇಂದಿನ ಕಾಲದಲ್ಲಿ ದಾಸೋಹ ಜೊತೆಗೆ ಧಾರ್ಮಿಕ ಬೋಧನೆ,ಜ್‌ಞಾನ ಹಾಗೂ ಶೈಕ್ಷಣಿಕ ಹಸಿವನ್ನು ನೀಗಿಸುತ್ತಿವೆ ಎಂದರು.
ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ಶಿವಯೋಗೀಶ್ವರ ಸ್ವಾಮೀಜಿ, ಮಾದೀಹಳ್ಳಿ ಹೀರೆಮಠದ ಚನ್ನಮಲ್ಲಿಕಾರ್ಜುನಸ್ವಾಮೀಜಿ ಆಶೀರ್ವಚನ ನೀಡಿದರು. ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಸ್ವಾಮೀಜಿ,ಬೂದಿಹಾಳ್ ಮಠದ ರಾಜಶೇಖರ ಸ್ವಾಮೀಜಿ,  ಪ್ರಭುಕುಮಾರ ಸ್ವಾಮೀಜಿ, ಬೆಲಗೂರಿನ ಬಿಂದುಮಾಧನ ಶರ್ಮ ಸ್ವಾಮೀಜಿ, ನುಗ್ಗೇಹಳ್ಳಿ ರಂಭಾಪುರ ಶಾಖಾ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಜ್ಜೀನೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement