ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಾಡಿನಾದ್ಯಂತ ಉತ್ತಮ ಮಳೆ-ಬೆಳೆಯಾಗಲಿ: ರಂಗಾಪುರ ಶ್ರೀ

Vishwanath S
Updated On : 7 Jul 2013, 12:38 pm

ತಿಪಟೂರು: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಶ್ರೀ ಪರದೇಶಿಕೇಂದ್ರಸ್ವಾಮೀಜಿ ಗುರುಪರಂಪರೆಯ ಮೂಲಗುರುಗಳ ಜಯಂತಿ ಹಾಗೂ ನಾಡಿನ ಅನಾವೃಷ್ಟಿ ಪ್ರಯುಕ್ತ ಹೋಮ, ಹವನ ಇತ್ಯಾದಿ ಪೂಜಾಕಾರ್ಯಕ್ರಮಗಳು 7ನೇ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದವು.
ಈ ಸಂದರ್ಭದಲ್ಲಿ ನಾಡಿನಾದ್ಯಂತ ಸಾವಿರಾರು ಭಕ್ತರು ಆಗಮಿಸಿ ಶ್ರೀ ಗುರುಗಳ ಕೃಪೆಗೆ ಪಾತ್ರರಾದರು.
ಪೂಜಾ ಕಾರ್ಯಕ್ರಮಗಳ ನಂತರ ಆಶೀರ್ವಚನ ನೀಡಿದ ಶ್ರೀಗಳು ನಾಡಿನಾದ್ಯಂತ ಉತ್ತಮ ಮಳೆ-ಬೆಳೆಯಾಗಲಿ, ಸಮಾಜದಲ್ಲಿ ಸುಖ ಶಾಂತಿ ನೆಲೆಸುವ ಮೂಲಕ ಪ್ರತಿಯೊಬ್ಬರೂ ನೆಮ್ಮದಿಯಿಂದ ಬಾಳಲಿ ಎಂದರು.
 ಮೂಲ ಗುರುಗಳ ಗದ್ದುಗೆಗೆ ಮಾಡಿದ್ದ ವಿಶೇಷ ಹೂವಿನ ಅಲಂಕಾರ ಕಣ್ಮನ ಸೆಳೆಯುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement