ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೀಜೋಪಚಾರ ಪದ್ಧತಿ ಪ್ರಾತ್ಯಕ್ಷಿಕೆ

Vishwanath S
Updated On : 8 Jul 2013, 12:59 pm

ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭೂಚೇತನ ಯೋಜನೆಯಡಿ ಚಿಕ್ಕನಾಯಕನಹಳ್ಳಿ ತಾಲೂಕಿನ ರೈತ ಅನುವುಗಾರರಿಗೆ ಒಂದು ವಾರದ ತರಬೇತಿ ಕಾರ್ಯಕ್ರಮದಲ್ಲಿ ನಾಲ್ಕನೇ ದಿನದಂದು ಬೀಜೋಪಚಾರ ಮಾಡುವ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.  ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಕೆ.ಎಂ. ಶ್ರೀನಿವಾಸ್ ರೆಡ್ಡಿ ಬೀಜೋಪಚಾರ ಪ್ರಾತ್ಯಕ್ಷಿಕೆಯನ್ನು ರೈತ ಅನುವುಗಾರರಿಗೆ ಪರಿಚಯಿಸಿದರು. ರೈತರು ತಾವು ಬೆಳೆದ ಬೆಳೆಗಳು ಅನೇಕ ಮಣ್ಣು ಮತ್ತು ಬೀಜದ ಮೂಲಕ ಪ್ರಸಾರವಾಗುವ ರೋಗಗಳಿಗೆ ತುತ್ತಾಗಿ ಇಳುವರಿ ಕಡಿಮೆಯಾಗುತ್ತದೆ. ಆದ ಕಾರಣ ಬೀಜಗಳಿಂದ ಅನೇಕ ರೋಗಗಳು ಮುಂದಿನ ದಿನದಲ್ಲಿ ಬರುವುದನ್ನು ತಪ್ಪಿಸಲು ಬೀಜೋಪಚಾರ ಮಾಡಬೇಕೆಂದು ತಿಳಿಸಿದರು.  ಕೇಂದ್ರದ ಕೃಷಿ ವಿಸ್ತರಣೆ ವಿಷಯ ತಜ್ಞ ಶಂಕರ ದ್ವಿದಳ ಧಾನ್ಯದ ಸೊರಗು ರೋಗ, ರಾಗಿ ಮತ್ತು ಬತ್ತದಲ್ಲಿ ಬೆಂಕಿ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತ ಕ್ರಮವಾಗಿ ಬಿತ್ತನೆಗೆ ಮುಂಚೆ ಪ್ರತಿ ಕೆ.ಜಿ ಬೀಜಕ್ಕೆ 2ಗ್ರಾಂ ನಂತೆ ಕಾರ್ಬನ್ ಡೈಜಿಯಂ (ಬೆವಿಸ್ಟಿನ್) ಬೀಜೋಪಚಾರ ಮಾಡಬೇಕೆಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ರೈತ ಅನುವುಗಾರರು ಇಂತಹ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಕೌಶಲ್ಯತೆಯನ್ನು ಬೆಳೆಸಿಕೊಂಡು ರೈತರಿಗೆ ಅರಿವು ಮೂಡಿಸಲು ನೆರವಾಗಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement