ಸಿರಿಧಾನ್ಯ ಮೇಳದಲ್ಲಿ ಆಧುನಿಕ ಕೃಷಿ ಭಜನೆ
ತುಮಕೂರು: ಅಪ್ಪಟ ದೇಸಿ ಕೃಷಿ ಮೇಳದಲ್ಲೂ ಆಧುನಿಕ ಕೃಷಿ ಭಜನೆ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಪಂ ಸಿಇಓ ಗೋವಿಂದರಾಜು ಮಾತನಾಡಿ, ಮೊದಲಿಗೆ ರಾಗಿ ಸೇರಿದಂತೆ ಹಲವು ಸಿರಿಧಾನ್ಯಗಳ ಕುರಿತು ತಮ್ಮ ನೆನಪನ್ನು ಹಂಚಿಕೊಂಡರು. ನಂತರ ಆಧುನಿಕ ಕೃಷಿಯತ್ತ ಹೊರಳಿದರು. ಜಿಲ್ಲೆಯಲ್ಲಿ 12 ಲಕ್ಷ ಜನಸಂಖ್ಯೆ ಇದ್ದಾಗ 10 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕೃಷಿ ನಡೆಯುತ್ತಿತ್ತು. ಈಗ ಜನಸಂಖ್ಯೆ 20 ಲಕ್ಷ ಮೀರಿದೆ. ಈಗಲೂ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಷ್ಟೇ ಬೆಳೆ ಬೆಳೆಯಲಾಗುತ್ತಿದೆ. ಕಡಿಮೆ ನೀರು ಬಳಸಿ, ಹೆಚ್ಚು ಇಳುವರಿ ಕೊಡುವ ಬೆಳೆಗಳನ್ನು ಹೆಚ್ಚು-ಹೆಚ್ಚು ಬೆಳೆಯಬೇಕಿದೆ. ಇರುವ ಭೂಮಿಯಲ್ಲೇ ಹೆಚ್ಚು-ಹೆಚ್ಚು ಆಹಾರ ಬೆಳೆ
ಬೆಳೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಹೀಗೆ ಮಾಡಲು ಆಧುನಿಕ ಕೃಷಿ ತಂತ್ರಜ್ಞಾನದಿಂದ ಸಾಧ್ಯ ಎಂದು ಗೋವಿಂದರಾಜು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಸಂಶೋಧನಾ ಸಂಸ್ಥೆಗಳು, ಹೊಸ-ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಂತೆ, ಬೀಜ ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಬೇಕು ಎಂದರು.