ಇಂದು ಸಮುದಾಯ ಭವನದ ನೆಲಮಹಡಿ ಕಟ್ಟಡದ ಉದ್ಘಾಟನೆ
ತಿಪಟೂರು: ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಸಮುದಾಯ ಭವನದ ನೆಲಮಹಡಿ ಕಟ್ಟಡದ ಉದ್ಘಾಟನೆ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಮಂಗಳವಾರ ಮಧ್ಯಾಹ್ನ 2ಗಂಟೆಗೆ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ.
ಕಟ್ಟಡ ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ, ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ರಾಜ್ಯಾಧ್ಯಕ್ಷ ಎಲ್. ಭೈರಪ್ಪ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ತಾ.ಅಧ್ಯಕ್ಷ ಕೆ.ಎಂ.ರಾಜಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷ ಸಣ್ಣಮುದ್ದಯ್ಯ, ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಕೆ.ಕುಲಕರ್ಣಿ, ಸಂಘದ ಪ್ರ.ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡವ, ಉಪವಿಭಾಗಾಧಿಕಾರಿ ಶಿಲ್ಪ, ಸಂಘದ ಖಜಾಂಚಿ ಯೋಗಾನಾಂದ್, ತಹಸೀಲ್ದಾರ್ ಮಂಜುನಾಥ್, ಇಓ ಡಾ.ಕೃಷ್ಣಾರೆಡ್ಡಿ, ಪೌರಾಯುಕ್ತ ಚಂದ್ರಶೇಖರಯ್ಯ, ಬಿಇಓ ಮನಮೋಹನ್ ಮತ್ತಿತರರು ಭಾಗವಹಿಸಲಿದ್ದಾರೆ.