ತಿಪಟೂರು ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಗಂಗಾಧರ್ ಆಯ್ಕೆ
ತಿಪಟೂರು: ನಗರದ ಸಿಂಗ್ರಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಬಿಜೆಪಿ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಹರಿಸಮುದ್ರ ಗಂಗಾಧರ್ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷರಾಗಿ ಶಿವಸ್ವಾಮಿ ನೂತನ ಅಧ್ಯಕ್ಷ ಗಂಗಾಧರ್ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ವಿಶ್ವನಾಥ್, ಮಾಜಿ ಶಾಸಕ ಬಿ.ಸಿ.ನಾಗೇಶ್, ಬಿಜೆಪಿ ಮುಖಂಡ ದಿವಾಕರ್, ರಾಜ್ಯ ಬಿಜೆಪಿ ಯುವ ಮೋರ್ಚ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್, ನಗರಸಭಾ ಸದಸ್ಯ ಪ್ರಸನ್ನಕುಮಾರ್, ತಾ.ಪಂ.ಅಧ್ಯಕ್ಷ ಭಾನುಪ್ರಕಾಶ್, ಎಪಿಎಂಸಿ ಅಧ್ಯಕ್ಷ ಪ್ರಕಾಶ್, ಕೃಷಿಕ ಸಮಾಜದ ದೇವರಾಜು, ತಾ.ಪಂ.ಸದಸ್ಯರಾದ ಶಿವಗಂಗಮ್ಮ, ಪುಷ್ಪ, ತಾ.ಪಂ.ಮಾಜಿ ಅಧ್ಯಕ್ಷೆ ವಸಂತಗಂಗಾಧರ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಗಂಗರಾಜ, ಪಕ್ಷದ ಮುಖಂಡರಾದ ಸುರೇಶ್, ಶಂಕರಪ್ಪ ಮತ್ತಿತರರಿದ್ದರು.