ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿಗೆ ರಾಷ್ಟ್ರೀಯ ಪ್ರಶಸ್ತಿ
ಕ.ಪ್ರ.ವಾರ್ತೆ ತುಮಕೂರು ಜು. 8
ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜಿಗೆ 2013 ರ ಸಿಎಂಎಸ್ಬಿ (ಮಾಧ್ಯಮ ಮತ್ತು ಉಪಗ್ರಹ ಪ್ರಸಾರ ಪರಿಷತ್) ಪ್ರಶಸ್ತಿ ಸಂದಿದೆ.
ಮಾಧ್ಯಮ ಮತ್ತು ಉಪಗ್ರಹ ಪ್ರಸಾರ ಪರಿಷತ್ ಸಂಸ್ಥೆ ದೇಶದಲ್ಲಿನ ಆಯ್ದ ಕಾಲೇಜುಗಳಲ್ಲಿನ ಶೈಕ್ಷಣಿಕ ಸೇವೆ ಮತ್ತು ಚಟುವಟಿಕೆಗಳನ್ನು ಗುರುತಿಸಿ ಕೊಡ ಮಾಡುವ ರಾಷ್ಟ್ರೀಯ ವರ್ಷದ ಕಾಲೇಜು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿತ್ತು. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಸಿಎಂಎಸ್ಬಿ ಅಧ್ಯಕ್ಷ ಬಿಕೆ ಬಂಗಾರಿ ಮತ್ತು ಕಾರ್ಯದರ್ಶಿ ಸಂತೋಷ್ ಲೋಹಾರ್ ಅವರಿಂದ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ತರಬೇತಿ ಮತ್ತು ಉದ್ಯೋಗ ನಿಯೋಜನೆ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ. ಶಿವಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಭಾರತಿ ವಿಷ್ಣುವರ್ಧನ್, ಎಲ್.ಆರ್. ಪಚಾವೋ ಮುಂತಾದವರು ಹಾಜರಿದ್ದರು.