ಜೀವನ ಜೋಪಾನ ಯಕ್ಷಗಾನ
ಚಿಕ್ಕನಾಯಕನಹಳ್ಳಿ: ಎಚ್ಐವಿ ಮತ್ತು ಏಡ್ಸ್ ರೋಗದ ವಿರುದ್ಧ ಯಕ್ಷಗಾನದ ಮೂಲಕ ಜನಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಜೀವನ ಜೋಪಾನ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯಕ್ಷಗಾನದ ಮೆರಗು ಜನಾಕರ್ಷಣೆ ಕೇಂದ್ರ ಬಿಂದುವಾಗಿತ್ತು. ಮನುಷ್ಯನ ದೇಹದಲ್ಲಿರುವ ಸಹಜವಾದ ರೋಗನಿರೋಧಕ ಶಕ್ತಿಯನ್ನು ಕುಂದಿಸುವ ವೈರಾಣುಗಳಿರುತ್ತದೆ.ಇದು ಸೂಕ್ಷ್ಮ ವೈರಸ್. ಇದು ಮನುಷ್ಯನ ದೇಹದಲ್ಲಿ ಮಾತ್ರ ಬದುಕಬಲ್ಲದು ಎಂಬ ಕುರಿತು ವಿವರಿಸಲಾಯಿತು.
ತಡೆಗಟ್ಟುವಿಕೆ: ಸುರಕ್ಷಿತ ಲೈಂಗಿಕ ಕ್ರಿಯೆ, ವಿವಾಹಪೂರ್ವ ಬ್ರಹ್ಮಚರ್ಯೆ, ಮುಂತಾದವುಗಳ ಕುರಿತಂತೆ ವಿವರಿಸಲಾಯಿತು. ರೋಗಬರದಂತೆ ತಡೆಗಟ್ಟುವುದು ಮಾತ್ರ ಪರಿಹಾರ. ಏಡ್ಸ್ನ್ನು ದೂರವಿಡಿ,ಏಡ್ಸ್ ರೋಗಿಗಳನ್ನಲ್ಲ ಎಂಬ ಘೋಷಣೆಯಂತೆ ಯಕ್ಷಗಾನದಲ್ಲಿ ರೋಗದಿಂದಾಗುವ ದುಷ್ಪಪರಿಣಾಮಗಳನ್ನು ಮನಮುಟ್ಟುವಂತೆ ಪಾತ್ರಧಾರಿಗಳು ವೇದಿಕೆಯಲ್ಲಿ ಅಭಿನಯಿಸಿದರು.
ಭಾಗವಹಿಸಿದ ಕಲಾವಿದರು. ಕುಮಟಾದ ಗಣಪತಿ ಹೆಗಡೆ ನಿರ್ದೇಶನದಲ್ಲಿ, ಕುಂದಾಪುರದ ಗಣೇಶ್ ನಾಯಕ್, ಶ್ರೀಧರ್ ಕುಂಚನ್, ಗಂಗಾಧರ್ ಶೇಳಗಿ, ಸುರೇಂದ್ರ ಗಾಣಿಗ, ಶಿವಕುಮಾರ್ ಶಿರಳಗಿ,ರ ಾಜು ಪಾಜಾರ್ ಉತ್ತಮ ಅಭಿನಯ ನೀಡಿದರು. ಧನಂಜಯ್ ಚಂಡೆ, ನಾಗರಾಜ್ ಮದ್ದಲೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಸ್.ರಂಗನಾಥ್, ಎಸ್.ನವೀನ್, ಎಸ್.ಡಿ.ಶ್ರೀನಿವಾಸ್,ನರಸಿಂಹಮೂರ್ತಿ, ಪಿ.ಕೆ.ಶಿವನಂಜಮ್ಮ, ವಿಮಲಮ್ಮ, ಶ್ರೀಧರ್, ಡಾ.ಪ್ರದೀಪ್ ಉಪಸ್ಥಿತರಿದ್ದರು.