ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮುಖ್ಯಶಿಕ್ಷಕಿ ವಿರುದ್ಧ ಅವ್ಯವಹಾರದ ಆರೋಪ: ಬೀಗ ಜಡಿದು ಪ್ರತಿಭಟನೆ

Rashmi Kasaragodu
Updated On : 11 Jul 2013, 12:58 pm

ಚಿಕ್ಕನಾಯಕನಹಳ್ಳಿ: ಗೋಡೇಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭಾರ ಮುಖ್ಯಶಿಕ್ಷಕಿಯೋರ್ವರು ಶಾಲೆಯಲ್ಲಿ ಹಣ ಮತ್ತು ಅಧಿಕಾರ ದುರುಪಯಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಶಾಲೆಗೆ ಬೀಗ  ಹಾಕಿ ಪ್ರತಿಭಟಿಸಿದರು.
ಸದರಿ ಪ್ರಭಾರ ಮುಖ್ಯ ಶಿಕ್ಷಕಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಶಾಲೆಯಲ್ಲಿಯು ಸಹ ಇದೇ ರೀತಿ ವರ್ತನೆ ತೋರಿದ್ದರಿಂದ ಇಲ್ಲಿಗೆ ವರ್ಗ ಮಾಡಿಕೊಂಡು ಬಂದಿದ್ದರು. ಆದರೆ ಇಲ್ಲಿಯೂ ಸಹ ಅವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದೆ ದುರ್ವತನೆ ತೋರಿದ್ದಲ್ಲಲದೆ, ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮನಸಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ಮಕ್ಕಳು ಮನೆಯಲ್ಲಿ ಪೋಷಕರಿಗೆ ದೂರುತ್ತಿದ್ದರು.
ಇದಲ್ಲದೆ ಶಾಲಾಭಿವೃದ್ಧಿ ಸಮಿತಿಯ 33 ಸಾವಿರ ರು. ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಶಾಲೆಯಲ್ಲಿ ಬಿಸಿಯೂಟವನ್ನು ಸಮರ್ಪಕವಾಗಿ ನಿರ್ವಹಸದೆ ಕೆಂಗಣ್ಣಿಗೆ ಪಾತ್ರರಾಗಿದ್ದರು. ಈ ಬಗ್ಗೆ ಹಿಂದೆ ಬಿಇಓ ಸಮ್ಮುಖದಲ್ಲಿ ಸಭೆ ಸೇರಿ ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದರೂ ಸಹ ಅದೇ ಛಾಳಿ ಮುಂದುವರಿದ ಪರಿಣಾಮ, ಈ ಬಗ್ಗೆ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳದ ಪ್ರಯುಕ್ತ ಪ್ರತಿಭಟನೆ ಅನಿವಾರ್ಯವಾಯಿತು ಎಂದು ಗ್ರಾಮಸ್ಥರು ಪಿಎಸ್ಐ ಬಿ.ಟಿ. ಗೋವಿಂದ ಅವರ ಬಳಿ ವಿವರಿಸಿದರು.
ನಂತರ ಶಾಲೆಯ ಕಚೇರಿಯಲ್ಲಿ ನಡೆದ ಮಾತುಕತೆ ವೇಳೆ ಸದ್ಯದ ಶಾಲೆಯ ಗೊಂದಲಕ್ಕೆ ಕಾರಣವಾದ ಶಿಕ್ಷಕಿ  ಕಡ್ಡಾಯ ರಜೆಯೆ ಮೇಲೆ ತೆರಳುವುದು, ನಂತರ ಆಕೆ ಬೇರೆಯಾವುದಾದರು ಶಾಲೆಗೆ ವರ್ಗಾಯಿಸಿಕೊಳ್ಳುವುದು, ಶಾಲೆಯಲ್ಲಿ ನಡೆದಿರುವ ಅವ್ಯವಹಾರ ಸರಿಪಡಿಸುವುದು ಸೇರಿದಂತೆ ಗ್ರಾಮಸ್ಥರ ಬೇಡಿಕೆಗಳನ್ನು ಜುಲೈ 15 ರಂದು ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಹರಿಸುವದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement