ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸತ್ಯ ಎತ್ತಿ ಹಿಡಿಯಲು ಸಹಕರಿಸಿ

Rashmi Kasaragodu
Updated On : 11 Jul 2013, 12:58 pm

ತುಮಕೂರು: ಅನ್ನಭಾಗ್ಯ ಯೋಜನೆ ಜಾರಿಯಲ್ಲಿ ಅಡ್ಡಗಾಲು ಹಾಕುವ ಮಾಫಿಯಾಗಳನ್ನು ಹಾಗೂ ಇಲಾಖೆಯ ಮಾಫಿಯಾಗಳನ್ನು ಮಟ್ಟ ಹಾಕಲು, ಸತ್ಯ ಎತ್ತಿ ಹಿಡಿಯಲು ಸಹಕರಿಸುವಂತೆ ಜಿಲ್ಲಾಧಿಕಾರಿ  ಕೆ.ಎಸ್. ಸತ್ಯಮೂರ್ತಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.
ಸಗಟು ವ್ಯಾಪಾರಿಗಳು, ವರ್ತಕರ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಕ್ರಮ ವಹಿಸಲಾಗುವುದು. ಈ ಸಂಬಂಧ ಮೇಲ್ವೀಚಾರಣೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಟಾಸ್ಕ್ ಫೋರ್ಸ್ ರಚಿಸಬೇಕು. ಸಗಟು ಮಾರಾಟ ಮಳಿಗೆಗಳ ಬಳಿ ಮಪ್ತಿ ಪೊಲೀಸರನ್ನು ಹಾಕಬೇಕು. ನ್ಯಾಯಬೆಲೆ ಅಂಗಡಿಗಳು, ಸಗಟು ಆಹಾರ ಮಳಿಗೆಗಳ ಸಂಬಂಧ ಆರೋಪಗಳು ಬಂದಾಗ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವೆ. ದಯಮಾಡಿ ಈ ವಿಚಾರದಲ್ಲಿ ಜನಪ್ರತಿನಿಧಿಗಳು ತಲೆ ಹಾಕಬೇಡಿ. ಅರ್ಥ ಮಾಡಿಕೊಳ್ಳಿ. ಅಕ್ರಮ ಆಹಾರ ಪದಾರ್ಥ ಸಾಗಾಟ ವಾಹನಗಳನ್ನು ತಡೆದಾಗ, ಫೋನ್ ಮಾಡುವುದು ಬೇಡ. ಜನಪ್ರತಿನಿಧಿಗಳು ಸಹಕರಿಸಿ. ಜನಪ್ರತಿನಿಧಿಗಳು ನ್ಯಾಯಬೆಲೆ ಅಂಗಡಿಗಳಿಗೆ ಸ್ಪಂದಿಸುವುದಕ್ಕಿಂತ ಹೆಚ್ಚಾಗಿ ಕಾರ್ಡ್ದಾರರಿಗೆ ಸ್ಪಂದಿಸಿ. ಇದನ್ನು ಪ್ರೀತಿಯಿಂದಲೇ ಹೇಳುತ್ತಿದ್ದೇನೆ. ಆಹಾರ ಇಲಾಖೆ ಮಾಫಿಯಾ, ಅನ್ನ ಭಾಗ್ಯ ಯೋಜನೆಗೆ ಅಡ್ಡಗಾಲಾಕುವ ಮಾಫಿಯಾಗಳನ್ನು ಮಟ್ಟ ಹಾಕಲು, ಸತ್ಯ ಎತ್ತಿ ಹಿಡಿಯಲು ಸಹಕರಿಸುವಂತೆ ಸತ್ಯಮೂರ್ತಿ ಮನವಿ ಮಾಡಿದರು. ಯೋಜನೆ ಜಾರಿಗೆ ನಾಗರಿಕರ ಸಹಕಾರ ಕೂಡ ಅಗತ್ಯ ಎಂದ ಡಿಸಿ, ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ 230 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 876 ನ್ಯಾಯಬೆಲೆ ಅಂಗಡಿಗಳಿವೆ ಎಂದು ಮಾಹಿತಿ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement